*ಸೀತಾಫಲ* (ಕುಸುಮ ಷಟ್ಪದಿ)

*ಸೀತಾಫಲ* (ಕುಸುಮ ಷಟ್ಪದಿ)

ಕವನ

ಒತ್ತೊತ್ತು ಬೀಜಗಳ

ಸುತ್ತಲೂ ಕೂಡುತಲಿ

ಮತ್ತೊಮ್ಮೆ ನೋಡಿದರೆ ಸಿಹಿಯಲ್ಲಿಯು|

ಗತ್ತನ್ನು ತೋರಿಸಿದೆ

ತುತ್ತಿನಲಿ ಬಂದಿಹುದು

ಬಿತ್ತರಿಸಿ ಬಿಡುತಿಹೆನು ಕಥೆಯನಿಂದು||

 

ಸೀತೆ ಕಣ್ಣೀರಿಂದು

ಸೀತಾಪತಿಯ ಬೆವರು

ಮಾತಿಲದೆ ಕೂಡಿದವು ಧರಣಿಯಲ್ಲಿ|

ಭೂತಾಯ ಗರ್ಭದಲಿ

ಹೂತುಹೋಗುತ ಬೆಳೆದು

ಸೀತಾಫಲದ ಹಣ್ಣು ರುಚಿರುಚಿಯಲಿ||

 

ಉದರಕ್ಕೆ ಹಿತವಾಗಿ

ಮಧುವಂತೆ ಸಿಹಿಯಾಗಿ

ಪದದಲ್ಲಿ ವರ್ಣಿಸುವೆ ತೋಷದಲ್ಲಿ|

ಹದದಲ್ಲಿ ತಿನ್ನುತಲಿ

ವದನಕ್ಕೆ ಕಾಂತಿಯದು

ಹೃದಯದಾ ರೋಗವಂ ದೂರವಿರಿಸಿ|

 

ಬಲುರುಚಿಯು ಬಾಯಿಗದು

ತಲೆಹೊಟ್ಟು ಶುಚಿಮಾಡಿ

ಭಲೆ ಭಲೇಯೆನ್ನುತಲಿ ಲೋಕದಲ್ಲಿ|

ಒಲವಿನಲಿ ಸೆಳೆಯುತ್ತ

ಬಲುಚೆಲುವು ಹಣ್ಣಿಂದು

ಫಲದಲ್ಲಿ ಸೀತಾಫಲವು ಯೋಗ್ಯವು||

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್