ಸೀಮೆಬದನೆಕಾಯಿ ಗೊಜ್ಜು

ಸೀಮೆಬದನೆಕಾಯಿ ಗೊಜ್ಜು

ಬೇಕಿರುವ ಸಾಮಗ್ರಿ

ಸೀಮೆಬದನೆಕಾಯಿ ಹೋಳುಗಳು - ೩ ಕಪ್, ತೆಂಗಿನ ತುರಿ - ಅರ್ಧ ಕಪ್, ಹುಣಸೆ ರಸ - ೩ ಚಮಚ, ಬೆಲ್ಲದ ಹುಡಿ - ೩ ಚಮಚ, ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ್ದು - ೪ ಚಮಚ, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ಕಡಲೆಕಾಯಿ ಬೀಜ - ೩ ಚಮಚ, ಕರಿಬೇವಿನ ಎಲೆಗಳು - ೭-೮, ಮಸಾಲೆ - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಸಾಲೆಗೆ : ಒಣಮೆಣಸಿನ ಕಾಯಿ - ೫-೬, ಕೊತ್ತಂಬರಿ ಬೀಜ - ೩ ಚಮಚ, ಉದ್ದಿನ ಬೇಳೆ - ೧ ಚಮಚ, ಕಡಲೆಬೇಳೆ - ೨ ಚಮಚ, ಮೆಂತ್ಯೆಕಾಳುಗಳು - ೧ ಚಮಚ, ಎಳ್ಳು - ೧ ಚಮಚ

ತಯಾರಿಸುವ ವಿಧಾನ

ಮಸಾಲೆ ಸಾಮಾಗ್ರಿಗಳನ್ನು ಹುರಿದು, ತೆಂಗಿನಕಾಯಿಯೊಂದಿಗೆ ಸೇರಿಸಿ ರುಬ್ಬಿ. ಸೀಮೆಬದನೆಕಾಯಿಗಳನ್ನು ಬೇಯಿಸಿಕೊಂಡಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಒಗ್ಗರಣೆ ಮಾಡಿ. ಕರಿಬೇವಿನ ಎಲೆಗಳು ಹಾಗೂ ಕಡಲೆಕಾಯಿ ಬೀಜಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಹುಣಸೆ ರಸ, ಬೆಲ್ಲದ ತುರಿ, ಮಸಾಲೆ ಹುಡಿ, ಉಪ್ಪು ಸೇರಿಸಿ, ಕುದಿ ಬಂದ ಮೇಲೆ ಬೇಯಿಸಿದ ಸೀಮೆಬದನೆಕಾಯಿ ಹೋಳುಗಳನ್ನು ಹಾಕಿ. ಚೆನ್ನಾಗಿ ಕುದಿ ಬಂದ ಮೇಲೆ ಒಲೆಯಿಂದ ಕೆಳಗಿರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.