ಸುಂದರ ದಾಂಪತ್ಯ
ಕವನ
ಸುಂದರ ದಾಂಪತ್ಯ
ಮಿಂಚಾಗಿ ನೀನು ಬಂದೆ,
ಹೊಸ ಹರುಷ ನೀನು ತಂದೆ,
ವರುಷದಲೆ ಕಂದಮ್ಮಗೆ ನಾ ತಂದೆ
ಪರಿಪೂರ್ಣನಾದೆ ನಾನು ಅಂದೆ.
ನನ್ನ ಬಾಳ ದೋಣಿಯಲ್ಲಿ,
ನನ್ನ ತೋಳ ತೆಕ್ಕೆಯಲ್ಲಿ,
ಆ ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ
ನೆಲೆಯಾಯಿತು ನಮ್ಮ ಜೀವನದಲ್ಲಿ,
ಆ ಮಧುರ ನೆನಪುಗಳಲ್ಲಿ,
ಮನ ನೊಂದ ಮಾತುಗಳಲ್ಲಿ,
ನಿನ್ನ ನಲ್ಮೆಯ ಹಿತವಚನದಲ್ಲಿ
ಕಂಡೆ ನಾ ಆ ಸ್ವರ್ಗವಿಲ್ಲಿ,
ನಮ್ಮ ಮನೆ ಮನದಲ್ಲಿ
ಆ ಸುಂದರ ಕನಸುಗಳಲ್ಲಿ
ನನಸಾದ ಈ ದಿನಗಳಲ್ಲಿ
ಅರಿತೆ ನಾ ಬಾಳ ನಡೆಯನಿಲ್ಲಿ.,
ಈ ಸುಮಧುರ ಬಂದನದಲ್ಲಿ
ಈ ಸುಂದರ ದಾಂಪತ್ಯದಲ್ಲಿ,
ಆ ಮಿಂಚಿನ ಮಿಲನದಲ್ಲಿ,
ಸಾಕ್ಷಾತ್ಕಾರವಾಯಿತಿಲ್ಲಿ.
ಸುಮದುರ, ಸುಂದರ ಕಲ್ಪನೆಯಲ್ಲಿ
ಸಾಗರವ ನದಿ ಸೇರುವ ತೆರದಲ್ಲಿ
ನಾನು, ನೀನು ದಡ ಸೇರುವಲ್ಲಿ
ಅರಿತು ಬೆರೆತು ಕೊಡುವೆವು ಇಲ್ಲಿ
ಬಂಧನವ ಬಿಡಿಸಲಾಗದಿಲ್ಲಿ
ಈ ಬಾಳ ಮಿಂಚಿನ ಓಟದಲ್ಲಿ
ಈ ಸುಂದರ ಜೇವನದಲ್ಲಿ.
ದಾಂಪತ್ಯವಾಯಿತು ಸುಖಾಂತ್ಯವಿಲ್ಲಿ
-ಮಧ್ವೇಶ್
Comments
ಉ: ಸುಂದರ ದಾಂಪತ್ಯ
In reply to ಉ: ಸುಂದರ ದಾಂಪತ್ಯ by bhalle
ಉ: ಸುಂದರ ದಾಂಪತ್ಯ
ಉ: ಸುಂದರ ದಾಂಪತ್ಯ
In reply to ಉ: ಸುಂದರ ದಾಂಪತ್ಯ by manju787
ಉ: ಸುಂದರ ದಾಂಪತ್ಯ