ಸುಂದರ ದಾಸವಾಳ

ಸುಂದರ ದಾಸವಾಳ

ಕವನ

ಹಳದಿಯ ಕದವನು ಮೆಲ್ಲಗೆ ಸರಿಸುತ

ಇಣುಕುವ ಸುಂದರಿ ನೀನ್ಯಾರೆ

ನಲ್ಲನು ಬರುವನೆ ಸೇರಲು ನಿನ್ನನು

ಲಜ್ಜೆಯ ತೊರೆಯುತ ನೀ ಬಾರೆ

 

ಬಿರಿದಿಹ ಕ್ಷಣದಲೆ ಸರಸದ ಬಯಕೆಯೆ

ಏತಕೆ ಈತರ ವೈಯಾರ

ಕೊಂಚವೆ ಸೈರಿಸು ಆತುರ ಸಲ್ಲದು

ಅರಸುತ ಬರುವನು ಸರದಾರ

 

ನೆತ್ತರ ಕೆಂಪಿನ ಬಣ್ಣದ ಚೆಲುವೆಯೆ

ಚಂದಕೆ ಸೋತೆನು ವೈಯಾರಿ

ನಿನ್ನಲಿ ತುಂಬಿದ ಜೇನನು ಹೀರಲು

ದುಂಬಿಯು ಬರುವುದು ಬಾಯಾರಿ

 

ಹಸಿರಿನ ಚಂದದ ಗಿಡದಲಿ ಅರಳಿದೆ

ಸುಂದರ ಹೂವಿದು ದಾಸ್ವಾಳ

ಹೂವಿನ ಎದೆಯಲಿ ಮೆಲ್ಲಗೆ ಇಣುಕಿದೆ

ಕೆಂಪಿನ ಬಣ್ಣದ ಮಕರಂದ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್