ಸುಗ್ಗಿ ಗೀತೆ

ಸುಗ್ಗಿ ಗೀತೆ

ಕವನ

ಘಲ್,ಘಲ್,ಘಲ್,ಘಲ್,ಘಲ್ ಘಲ್, ಘಲ್..........

ಆ.....ಆ.....ಆ.....ಆ.......ಹೋ.....ಹೋ......ಹೋ........

 

ಗೆಜ್ಜೆಯ ನಾದಕ್ಕೆ ಹೆಜ್ಜೆಯ ಹಾಕೋಣ

ಸಂತಸದಿ ಕೂಡಿ ಹಾಡುತ್ತ ನಲಿಯೋಣ.......

ಸಗ್ಗದ ಸುಖವನ್ನು ತಂದಿತು ಸುಗ್ಗಿಯು.........

ಕಣ್ತುಂಬಿ ನಿಂತ ಬೆಳಸಿಯ ರಾಶಿಯು :

ಘಲ್, ಘಲ್, ಘಲ್, ಘಲ್...........

 

ಹೊಲಗದ್ದೆಯಲ್ಲಿ ನಿತ್ಯದ ಕಾಯಕ

ಭೂರಮೆ ಮಡಿಲಲ್ಲಿ ನಾನೇ ನಾಯಕ........

ಹಾಡುತ್ತಾ ನಾವೆಲ್ಲಾ ಆಯಾಸ ಮರೆಯೋಣ...,....

ಕುಣಿಯುತ್ತ ಎಲ್ಲರು ಹರುಷದಿ ನಲಿಯೋಣ.......

ಘಲ್, ಘಲ್, ಘಲ್, ಘಲ್...........

 

ಬುತ್ತಿಯ ಹೊತ್ಕಂಡು ಮನೆಯಾಕೆ ಬರುವಳು

ಬಿಸಿ,ಬಿಸಿ ಬಸ್ಸಾರು ಮುದ್ದೆಯ ತರುವಾಳು...........

ಹೊಂಗೆಯ ಮರದಡಿ ಉಂಬೊದು ಬಲು ಚೆಂದ..........

ಮಡದಿ ಮೊಗದಲ್ಲಿ ಅರಳುವ ನಗು ಅಂದ ::

ಘಲ್, ಘಲ್, ಘಲ್, ಘಲ್...........

 

ಬೆಳಸಿಯ ರಾಶಿಯು ಅಂಗಳದ ನಡುವಲ್ಲಿ..........

ಪರಿಶ್ರಮದ ಫಲವು ತುಂಬಿದ ಕಣ್ಣಲ್ಲಿ

ರಾಶಿಯ ಸುತ್ತಾಲು ಹಾಡುತ್ತ ಕುಣಿಯೋಣ..........

ಗೆಜ್ಜೆಯ ನಾದದಲಿ ಹೆಜ್ಜೆಯ ಬೆರೆಸೋಣ :::

ಘಲ್, ಘಲ್, ಘಲ್, ಘಲ್...........

ಆ....ಆ....ಆ....ಆ..ಹೋ...ಹೋ...ಹೋ......

                  

-ವೀಣಾ ಕೃಷ್ಣಮೂರ್ತಿ ,ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್