ಸೂತ್ರ ಕಿತ್ತ ಹಿಂದಿಯ ಗಾಳಿಪಟ(ಕೈಟ್ಸ್)

ಸೂತ್ರ ಕಿತ್ತ ಹಿಂದಿಯ ಗಾಳಿಪಟ(ಕೈಟ್ಸ್)

ಬರಹ
ಇದು ಕರ್ನಾಟಕ. ಇಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಬಾಷೆಯೇ ಇಲ್ಲಿಯ ಅನಭಿಶಿಕ್ತ ದೊರೆ ಎನ್ನುವುದೇ ವಾಸ್ತವ.
ಮನರಂಜನೆಯ ಹೆಸರಿನಲ್ಲಿ ಕನ್ನಡಿಗರ ಕಣ್ಣಿಗೆ ಮಣ್ಣೆರೆಚಿವ ಕೆಲಸ ನಡೆಯುತ್ತಲೇ ಬಂದಿದೆ. ಇದೀಗ ಹಿಂದಿಯ ಚಿತ್ರ "ಕೈಟ್ಸ್" ಸರದಿ. 
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸೂತ್ರದ ಅನುಸಾರವಾಗಿ ಈ ಚಿತ್ರ ಕೇವಲ ೨೧ ಪ್ರತಿಗಳನ್ನು ಹಾಕಬೇಕಿತ್ತು. ಕೊಟ್ಟ ಮಾತಿಗೆ ತಪ್ಪಿದ ಚಿತ್ರತಂಡ ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 
ಇದನ್ನು ಪ್ರಶ್ನಿಸಿ ಸಭೆ ಕರೆದಾಗ ಚಿತ್ರತಂಡದ ವತಿಯಿಂದ ಯಾರೋಬ್ಬರೂ ಹಾಜರಾಗಿಲ್ಲ. 
ಕನ್ನಡದ ಎರಡು ಬಹುಕೋಟಿ ಚಿತ್ರಗಳು,ಶಂಕರ್ ಐ.ಪಿ.ಎಸ್ ಮಾಗು ನೂರು ಜನ್ಮಕೂ ಇಂದು ಬಿಡಿಗಡೆಯಾಗಲಿವೆ. 
ಇರುವ ಚಿತ್ರಮಂದಿರಗಳಲ್ಲೆಲ್ಲಾ ಹಿಂದಿ ಚಿತ್ರ ಬಿಡಿಗಡೆ ಮಾಡಿದರೆ ಕನ್ನಡದ ಚಿತ್ರಗಳ ಗತಿ ಏನು?
ಚೆನ್ನಾಗಿ ಓಡುತ್ತಿರುವ ಆಪ್ತರಕ್ಷಕ, ಪೃಥ್ವಿ, ನಾನು ನನ್ನ ಕನಸು. ಉಲ್ಲಾಸ ಉತ್ಸಾಹ ಚಿತ್ರಗಳನ್ನು ಕಿತ್ತು ಹಾಕಿ ಯಾವುದೋ ಹಿಂದಿ ಚಿತ್ರ ಹಾಕುವುದು ನೀಚ ಕೃತ್ಯವಲ್ಲದೆ ಮತ್ತೇನು?
ಕೈಟ್ಸ್ ಚಿತ್ರತಂದ ಸೂತ್ರ ಕಿತ್ತ ಗಾಳಿಪಟದಂತೆ ಲಂಗು, ಲಗಾಮು ಇಲ್ಲದೆ ನಡೆದುಕೊಂದ ರೀತಿ ಖಂಡನೀಯ.
ಕನ್ನಡ ಚಿತ್ರಗಳ ಪರವಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಯಾವುದೇ ಬೇಡಿಕೆಗೆ ಮಣಿಯದೆ ಕನ್ನಡ ಚಿತ್ರಗಳನ್ನು ಉಳಿಸಿ-ಬೆಳೆಸುತ್ತಾರೆಂಬ ನಂಬಿಕೆ ನಮಗಿದೆ.
ಕಟ್ಟ ಕಡೆಯದಾಗಿ ಕನ್ನಡ ಚಿತ್ರಗಳಿಗೆ ಮಾರಕವಾಗಲಿರುವ ಈ "ಕೈಟ್ಸ್" ಚಿತ್ರವನ್ನು ಎಲ್ಲ ಸ್ವಾಭಿಮಾನಿ ಕನ್ನಡಿಗರೂ ಬಹಿಷ್ಕರಿಸೋಣ. 

ಇದು ಕರ್ನಾಟಕ. ಇಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಬಾಷೆಯೇ ಇಲ್ಲಿಯ ಅನಭಿಶಿಕ್ತ ದೊರೆ ಎನ್ನುವುದೇ ವಾಸ್ತವ.ಮನರಂಜನೆಯ ಹೆಸರಿನಲ್ಲಿ ಕನ್ನಡಿಗರ ಕಣ್ಣಿಗೆ ಮಣ್ಣೆರೆಚಿವ ಕೆಲಸ ನಡೆಯುತ್ತಲೇ ಬಂದಿದೆ. ಇದೀಗ ಹಿಂದಿಯ ಚಿತ್ರ "ಕೈಟ್ಸ್" ಸರದಿ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸೂತ್ರದ ಅನುಸಾರವಾಗಿ ಈ ಚಿತ್ರ ಕೇವಲ ೨೧ ಪ್ರತಿಗಳನ್ನು ಹಾಕಬೇಕಿತ್ತು. ಕೊಟ್ಟ ಮಾತಿಗೆ ತಪ್ಪಿದ ಚಿತ್ರತಂಡ ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಸಭೆ ಕರೆದಾಗ ಚಿತ್ರತಂಡದ ವತಿಯಿಂದ ಯಾರೋಬ್ಬರೂ ಹಾಜರಾಗಿಲ್ಲ. ಕನ್ನಡದ ಎರಡು ಬಹುಕೋಟಿ ಚಿತ್ರಗಳು,ಶಂಕರ್ ಐ.ಪಿ.ಎಸ್ ಮಾಗು ನೂರು ಜನ್ಮಕೂ ಇಂದು ಬಿಡಿಗಡೆಯಾಗಲಿವೆ. ಇರುವ ಚಿತ್ರಮಂದಿರಗಳಲ್ಲೆಲ್ಲಾ ಹಿಂದಿ ಚಿತ್ರ ಬಿಡಿಗಡೆ ಮಾಡಿದರೆ ಕನ್ನಡದ ಚಿತ್ರಗಳ ಗತಿ ಏನು?ಚೆನ್ನಾಗಿ ಓಡುತ್ತಿರುವ ಆಪ್ತರಕ್ಷಕ, ಪೃಥ್ವಿ, ನಾನು ನನ್ನ ಕನಸು. ಉಲ್ಲಾಸ ಉತ್ಸಾಹ ಚಿತ್ರಗಳನ್ನು ಕಿತ್ತು ಹಾಕಿ ಯಾವುದೋ ಹಿಂದಿ ಚಿತ್ರ ಹಾಕುವುದು ನೀಚ ಕೃತ್ಯವಲ್ಲದೆ ಮತ್ತೇನು?ಕೈಟ್ಸ್ ಚಿತ್ರತಂದ ಸೂತ್ರ ಕಿತ್ತ ಗಾಳಿಪಟದಂತೆ ಲಂಗು, ಲಗಾಮು ಇಲ್ಲದೆ ನಡೆದುಕೊಂದ ರೀತಿ ಖಂಡನೀಯ.ಕನ್ನಡ ಚಿತ್ರಗಳ ಪರವಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಯಾವುದೇ ಬೇಡಿಕೆಗೆ ಮಣಿಯದೆ ಕನ್ನಡ ಚಿತ್ರಗಳನ್ನು ಉಳಿಸಿ-ಬೆಳೆಸುತ್ತಾರೆಂಬ ನಂಬಿಕೆ ನಮಗಿದೆ.
ಕಟ್ಟ ಕಡೆಯದಾಗಿ ಕನ್ನಡ ಚಿತ್ರಗಳಿಗೆ ಮಾರಕವಾಗಲಿರುವ ಈ "ಕೈಟ್ಸ್" ಚಿತ್ರವನ್ನು ಎಲ್ಲ ಸ್ವಾಭಿಮಾನಿ ಕನ್ನಡಿಗರೂ ಬಹಿಷ್ಕರಿಸೋಣ.