ಸೂರೆ

ಸೂರೆ

ಬರಹ

ಸೂಱೆ, ಸೂರೆ (ನಾಮಪದ)
೧. ಕೊಳ್ಳೆ; ಲೂಟಿ; ಸುಲಿಗೆ (ನೆತ್ತರ ಸೂಱೆ ಶಾಕಿನಿಯರಿಗೆ ನಿಮಗುಱೆ ಸೂಱೆಯೋ ಭಂಡಾರ -ಕುಮಾರವ್ಯಾಸ; ಊರೊಳಗಣ ಭಟರೈತಂದು ಮಧುರೆಯ ಧಾರಿಣೀಶ್ವರನ ಪಾಳೆಯವ ಸೂಱೆಯನಾಡಿ ಗೂಡಾರಗಳನು ಕಿತ್ತು ಜಾರಿಸಿದರು ದೆಸೆದೆಸೆಗೆ - ಕಂನವಿ)
೨. (ಅಲಂಕಾರವಾಗಿ) ಅತಿಶಯ; ಆಧಿಕ್ಯ (ಪಾಳೆಯಪಾಳೆಯದೊಳಗೆ ಚೆಲ್ಲಿತು ಸೂಱೆ ವೀಳೆಯ ಹಿಡಿಹೊನ್ನುವರಹ -ಮೋಹನತರಂಗಿಣಿ)

[ತಮಿಳು: ಚೂಱೈ, ತೊದ: ಸುರಿ, ತುಳು: ಸೂರೆ, ತೆಲುಗು: ಚೂಱ]

(ಸೂಱೆಕಾಱ, ಸೂಱೆಗಾರ, ಚೂಱಕಾಱ, ಸೂರೆಕಾರ = ಲೂಟಿ ಮಾಡುವವನು, ಕೊಳ್ಳೆ ಹೊಡೆಯುವವನು (ಮೂಱುದಿಕ್ಕಿನಲಮರವೈಭವಸೂಱೆಕಾಱನನಱಸಿ ಕಾಣದೆ ಬೇಱೆ ಬೇಱೈತಂದು ಬಿನ್ನೈಸಿದರು ರಘುಪತಿಗೆ - ತೊರವೆರಾಮಾಯಣ); ಸೂಱೆಗೂಳು (ನಾ) = ಲೂಟಿ ಮಾಡಿದ ಆಹಾರ, ಕೊಳ್ಳೆ ಹೊಡೆದ ಕೂಳು; (ಅಲಂ) ತಿಂದು ಬಿಸಾಡಿದ ಆಹಾರ (ಸಾರ್ವಭೂಪಾಲನ ಸೂನು ಎನಿಸಿದವಗೆ ಸೂಱೆಗೂಳಿನ ತಿರುಕೆ - ಪುರಂದರದಾಸರು); ಸೂಱೆಗೊಡು = ೧.ಧಾರಾಳವಾಗಿ ನೀಡು, ಯಥೇಚ್ಛವಾಗಿ ಕೊಡು (ಸಮಸ್ತವಸ್ತುಗಳಂ ದೀನಾನಾಥಜನಂಗಳ್ಗೆ ಸೂಱೆಗೊಟ್ಟು - ಪಂಪಭಾರತ) ೨. ಅರ್ಪಿಸು ೩. ಆಕರ್ಷಿಸು, ಸೆಳೆ (ಹೃದಯವನ್ನು ಸೂರೆಗೊಳ್ಳುವಂತಹ . . .); ಸೂಱೆವೋಗು = ಲೂಟಿಯಾಗು, ಧ್ವಂಸವಾಗು)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet