ಸೃಷ್ಟಿ ಸೊಬಗು
ಕವನ
ಮುಂಜಾವದಲಿ ತೊಟ್ಟಿಕ್ಕುತಿಹ ಇಬ್ಬನಿಯ
ಸೃಷ್ಟಿ ಸೊಬಗಿನ ಪರಿಯ ಏನೆಂಬೆನು
ಇರುಳ ಚಂದಿರನು ಮೋಡದಲಿ ಮರೆಯಾಗಿ
ಉಷೆಯ ದಿಬ್ಬಣವ ಸ್ವಾಗತಿಸುವಂತೆ
ಮಲ್ಲಿಗೆಯ ಬಳ್ಳಿಯೊಳು ಕಂಗೊಳಿಪ ಮುತ್ತುಗಳು
ಕಂಪನ್ನು ಸೂಸುತಲಿ ಘಂ ಎಂದು ಪಸರಿಸಲು
ನೆಲದಲ್ಲಿ ಉದುರಿದ ಸುರಗಿ ಹೂವಿನ
ಸರಮಾಲೆ ಹೆಣೆದು ಅಲಂಕರಿಸುತಿಹೆನು
ಎದೆಯ ನೋವಿನ ಬಿಂದುಗಳೊಂದಾಗಿ ಕರಗಿ
ಹೆಣ್ಣ ಕಣ್ಣಿನ ಕಣ್ಣೀರ ಧಾರೆಯಾಗಿ
ಷೋಡಶಿಯ ಸುಂದರಿ ಕೆಂಪು ಗಲ್ಲದ ಚೆಲುವೆ
ನಕ್ಕು ಬಿಡು ನೀನೊಮ್ಮೆ ಮನದನ್ನೆ ಒಲವೆ
ಗೊನೆಬಾಳೆ ಬಳುಕುತಲಿ ಅತ್ತಿತ್ತ ತೂಗುತಿದೆ
ಮನುಜನಿಗೆ ಸಂದೇಶ ನೀಡಿ ಹರಸುತಿದೆ
ತರಚು ಗಾಯವನು ಕೆಣಕದಿರು ಎಂದೆಂದು
ಮದ್ದನ್ನು ಹಚ್ಚುತಲಿ ಮುತುವರ್ಜಿ ವಹಿಸು
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
