ಸೆಳೆತಗಳ ನಡುವೆ

ಸೆಳೆತಗಳ ನಡುವೆ

ಕವನ

ಯಾರ ಸೆಳೆತ ಎಲ್ಲಿರುವುದೊ

ಸಾರ ಸೇರೆ ಚಲಿಸಿರುವುದೊ

ಖಾರವಿರದ ಬದುಕಿನೊಳಗೆ ಸಾಗುತಿರುವೆನು

ಬಾರೆಯೆನ್ನ ಮೋಹದೊಡಲೆ

ತಾರೆಯೊಲವ ಸನಿಹ ತೋರೆ

ಧಾರೆಯೆರೆವೆಯೆನ್ನ ನಿನಗೆ ಸೇರುತಿರುವೆನು

 

ದಾರಿ ನಡೆಯೆ ಚಿಂತೆಯಿರದು

ಸಾರಿಯಿರುವೆ ಚೆಲುವ ಸೆಳೆದು

ತೋರಿಹೋಗಿ ನಿಮ್ಮ ನಡೆಯ ಸಾರುತಿರುವೆನು

ಹಾರಿ ನಡೆಯ ಬೇಡಿರೆಂದು

ಜಾರಿ ಹೋಗಬಹುದು ಜೀವ

ಚೀರಿಕಾಟ ಕೊಡದೆ ಬಾಳಿ ಹೋಗುತಿರುವೆನು

 

ಭಾವಪಯಣ ಯುಕ್ತವೆಂದು

ಯಾವ ನೋವು ಬರದುಯೆಂದು

ದೇವ ಬರುವ ಸಲಹಲೆಂದು ಕಾಯುತಿರುವೆನು

ಸೇವೆ ಮಾಡ್ವೆ ತಂದೆ ತಾಯ

ಬೇವುಯಿರದ ಬದುಕಿನಲ್ಲಿ

ಸಾವು ನೋವು ದೂರವಿರಲಿ ಬೇಡುತಿರುವೆನು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್