ಸೇವಾ ಧುರೀಣರು !

ಸೇವಾ ಧುರೀಣರು !

ಬರಹ

ಅಗೋ 'ಕರೆಘಂಟೆ' ಹೊಡಿತಲ್ಲ. ರಾಮ್ ಜಿ, ಇರಬೇಕು. 'ಜೈರಾಮ್ ಜಿಕಿ', ಎಂದವನೆ ರಾಮ್ಜಿ, ಹಾಲಿನ ಪ್ಯಾಕೆಟ್ ಕೊಟ್ಟು ಹೋದ ! ಹೊರಗೆ ನೊಡಿದ್ರೆ ಮಳೆ, ಗಾಳಿ, ಎರಡ್ದಿನದಿಂದ ಒಂದೇಸಮನೆ ಮಳೆ ಸುರಿತಿದೆ.ಮುಂಬೈ ನ ಜೀವನ 'ಅಸ್ತ ವ್ಯಸ್ತ' ವಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಸತ್ತವರು ಎಷ್ಟು ! ನೆರೆಯ ರಾಜ್ಯ, ಆಂಧ್ರದ ತೆಲಂಗಾಣ,ದಲ್ಲಿ ಮಳೆಯಿಂದ ಮರಣ ಹೊಂದಿದವರು, ನಮ್ಮ ಬೆಳಗಾಂ ಹತ್ತಿರ, ಒರಿಸ್ಸ, ದೆಹಲಿ, ರಾಜಸ್ಥಾನ, ಕಾಶ್ಮಿರದ ಮಂದಿ ಎಲ್ಲಾ ಮಳೆಯ ಪ್ರಕೊಪಕ್ಕೆ ಬಲಿಯಾದವರೆ !

ಆದರೆ ಇಲ್ಲಿ ಗಮನಿಸಬೇಕಾದದ್ದು. 'ರಾಮ್ ಜಿ' ಯಂತಹ ಹಲವಾರು, 'ಸೆವಾಧುರೀಣ'ರಿಂದ ನಮ್ಮ 'ಜೀವದ ಗಾಡಿ,' ಹಳಿತಪ್ಪದೆ ಉಳಿದಿದೆ !

ಇನ್ನು ನ್ಯುಸ್ ಪೇಪರ್ ನವರು, ಮನೆಯಲ್ಲಿ ದುಡಿಯಲು ಬರುವ ಕೆಲಸದ 'ಬಾಯಿ'ಗಳು, ರೈಲ್ವೆ ಡ್ರೈವರ್ ಗಳು, ಬಸ್ ಡ್ರೈವರ್ ಗಳು, ಕಚಡ ತೆಗೆಯುವ ನೌಕರರು. ವಿದ್ಯುಚ್ಛಕ್ತಿ ನೌಕರರು. ಟೆಲಿಫೊನ್ ನವರು, ಸ್ಕುಲ್ ಬಸ್ ಡ್ರೈವರ್ ಗಳು ವಗೈರ, ವಗೈರ.

ಒಂದುವೇಳೆ, ನಮ್ಮಂತೆ ಮುಸುಗು ಹಾಕಿಕೊಂಡು ಅವರೂ ಮಲಗಿದರೆ, ಏನಾಗಬಹುದು ಸ್ವಲ್ಪ ಯೋಚಿಸೋಣ !

ಕೊನೆಯಲ್ಲಿ, ನಮ್ಮವರೇ ಆದ, ನಮ್ಮ ಅಕ್ಕಂದಿರು, ತಂಗಿಯರು, ತಾಯಂದಿರು, ನಮ್ಮಹೆಂಡತಿಯರು. ಇವರನ್ನು ಎಂದಾದರೂ ಅಭಿನಂದಿಸಿದ್ದೇವೆಯೇ ? ಆರ್ಗನೈಸ್ಡ್ ಸೆಕ್ಟರ್ ನವರಿಗೆ ಎಷ್ಟು ಅನುಕೂಲ ? ಪಾಪ, ಇವರಿಗೆಲ್ಲಿ 'ಕ್ಯಾಶುಯಲ್ ಲೀವ್' ಗಳು. ಕಾಫಿ, ಸಿಗಲು ಒಂದ್ನಿಮ್ಷ ತಡವಾದ್ರೆ, ಮುಖ್- ಮುಖ ನೋಡ್ತೀವಿ !

ಇವರಿಗೆಲ್ಲಾ, ನನ್ನ ಹಾಗೂ ನಿಮ್ಮ ಪರವಾಗಿ ನಮ್ಮ ಅನಂತಾನಂತ ಅಬಿನಂದನೆಗಳು !

ಅಮ್ಮಂಗೆ ನೀವು ಎಂದಾದ್ರು 'ಥ್ಯಾಂಕ್ಸ್' ಹೇಳಿದೀರಾ ? ಎಂದು ನನ್ನ ಮೊಮ್ಮಗ, ಅವ್ರ ಅಪ್ಪನ್ನ ಹಗ್ಲೆಲ್ಲಾ ಕೇಳ್ತಾನೆ ಇರ್ತಾನೆ. "ಖಂಡಿತ ನೀನು ಸರಿ" ಎಂದು ಅವನಿಗೆ ಸಮಾಧಾನ ಮಾಡ್ತೀನಿ ! ಮಲ್ಗಿದಾನೆ; ಏಳ್ಲಿ ತಾಳಿ !!