ಸೌಂದರ್ಯ ಖನಿಗಳಗೇಕೆ ಸೌಂದರ್ಯದ ಚಿಂತೆ...?

ಸೌಂದರ್ಯ ಖನಿಗಳಗೇಕೆ ಸೌಂದರ್ಯದ ಚಿಂತೆ...?

Comments

ಬರಹ

ಕಳೆದ ಸೋಮವಾರ ನನಗೆ ರಜೆಯಿತ್ತು. ಆದ ಕಾರಣ ಸೂರ್ಯನು ನೆತ್ತಿ ಮೇಲೆ ಬಂದಾಗ ಹಾಸಿಗೆ ಬಿಟ್ಟು ಎದ್ದೆ. ಇದಕ್ಕೆ ತಯಾರಿದ್ದಂತೆ ಮನೆಯಲ್ಲಿ ಕೆಲವು ಹಿತವಚನಗಳು ಕೇಳಿದ್ದೂ ಆಯ್ತು. ಕ್ರಮೇಣ ನಿತ್ಯ ಕೆಲಸಗಳನ್ನು ಮುಗಿಸಿ, ತಿಂಡಿ ತಿಂದು ಹಾಗೆ ಊರಿನ ಸಂಚರಣೆಗೆ ಹೊರಟೆ. ಅದು ನನ್ನ ಪ್ರೀತಿಯ ಹಳೇ ಸೈಕಲನ್ನೇರಿ. ಅದು ಸರಿ ಸುಮಾರು 5 ವರ್ಷಳಿಂದ ಬಳಸುತ್ತಿರುವ ಸೈಕಲ್. ಕಳ್ಳನು ಕೂಡ ಆ ಸೈಕಲ್‌ ಅನ್ನು ಮುಟ್ಟಲ್ಲ.

ಹೀಗೆ ಸೈಕಲ್ ಸವಾರಿ ಹೊರಟ ನಾನು ನಮ್ಮೂರು ದಾಸರಹಳ್ಳಿ, ಕೆಂಪಾಪುರ, ಅಮೃತಹಳ್ಳಿ ಹಾಗೂ ಕಾಫಿ ಬೋರ್ಡ್‌ ಲೇಔಟ್‌ ಹೀಗೆ ಹಲವು ರಾಜ ಬೀದಿ, ಗಲ್ಲಿ ಗಲ್ಲಿಗಳನ್ನು ಸುಮಾರು 3 ಸುತ್ತಾಡಿದೆ. ಇಲ್ಲಿ ನನ್ನ ಗಮನ ಸೆಳೆದ ಬಹುಮುಖ್ಯ ವಿಚಾರ ಏನು ಗೊತ್ತಾ..? ಒಂದೊಂದು ಗಲ್ಲಿಗಳಲ್ಲೂ ಒಂದೊಂದು ಬ್ಯೂಟಿ ಪಾರ್ಲರ್‍ ಅಂಗಡಿಗಳು. ಅದು ಒಂದೂರಿಗೆ ಏಳೆಂಟು ಬ್ಯೂಟಿ ವರ್ಧಕ ಕೊಠಡಿಗಳು.

ಸುಮಾರು ಒಂದೊಂದು ಊರಿನ ಜನಸಂಖ್ಯೆ 1500 ರಿಂದ 2000. ಅದರಲ್ಲಿ ಬಹುಪಾಲು ಪುರುಷರಿದ್ದರೂ ಅವರ ಸೆಲ್‌ಗಳು ಕೇವಲ 3 ಅಥವಾ ೪ ಅಂಗಡಿಗಳು ಮಾತ್ರ. ಆದರೆ ಮಹಿಳೆಯರ ಸೌಂದರ್ಯ ವರ್ಧಕ ಅಂಗಡಿಗಳು ಇದರ ಎರಡಷ್ಟು. ದೇಶದಲ್ಲೇ ಹೆಣ್ಣು ಸಂತತಿ ಗಂಡು ಸಂತತಿಗಿಂತ ಹಿಂದೆ ಇದೆ. ಸುಮಾರು 100 ಅನುಪಾತದಲ್ಲಿ ಶೇ 20 ವೆತ್ಯಾಸ ಕಾಣಬಹಹುದು. ಇದಕ್ಕೆ ಕಾರಣಗಳು ಅನೇಕ.

ಬೇಕು ಖಂಡಿತಾ ಹೆಣ್ಣು ಮಕ್ಕಳಿಗೆ ಸೌಂದರ್ಯ ಬೇಕು. ಆದರೆ ಅದು ಪ್ರದರ್ಶನಕ್ಕೆ ಸೀಮಿತವಾಗಿರಬಾರದು. ಇದರಿಂದ ನಮ್ಮ ಗುಣ, ದೇಹ, ಹಾಗೂ ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸುವಂತಿದ್ದರೆ ಉತ್ತಮ. ಆದರೆ ಇದು ಬಿಟ್ಟು ಜಾಗತೀಕರಣ ಹಾಗೂ ಪಾಶ್ಚೀಮಾತ್ಯಕರಣಗೊಂಡಿರುವ ಸೌಂದರ್ಯ ಬೇಡ ಅನ್ನೋದು ನನ್ನ ಅಭಿಪ್ರಾಯ. ಇಂದಿನ ನಮ್ಮ ಹೆಣ್ಣು ಮಕ್ಕಳು ಅವರು ಬಾಲಕಿಯರಾಗಲಿ, ಶೋಡಷಿಗಳಾಗಲಿ, ಯುವತಿಯರಾಗಲಿ ಅಷ್ಟಾಕೆ ಮಧ್ಯ ವಯಸ್ಕರು ಕೂಡ ಸೌಂದರ್ಯವತಿಯಾಗಿರಲು ಹಪಹಪಿಸುತ್ತಾರೆ. ಇದರ ಮುಂದುವರೆದ ಭಾಗ ಸಮಾಜಕ್ಕೆ, ಕುಟುಂಬಕ್ಕೆ ಆಗುವ ಕೆಲವು ವಿಚಾರಗಳನ್ನು ಮನಗಾಣಬೇಕಾಗಿದೆ.

ನಮ್ಮ ಮಹಿಳೆಯರಿಗೆ ಸೌಂದರ್ಯದ ಪ್ರಜ್ಞೆ ಪುರಾತನ ಕಾಲದಿಂದ ಬೆಳೆದು ಬಂದಿರುವ ಲಕ್ಷಣ. ಅದರಲ್ಲೂ ಹೆಣ್ಣು ಮಕ್ಕಳ ಸೌಂದರ್ಯ ವರ್ಣಿಸಲು ಕನ್ನಡ ಜಾನಪದ ಕತೆಗಳು, ಜಾನಪದ ಗೀತೆಗಳು ಹಾಗೂ ಗೀಗೀಪದ ಸೇರಿದಂತೆ ಸೋಬಾಣ ಪದಗಳಲ್ಲೂ ನಾವು ಸ್ಪಷ್ಟವಾಗಿ ಗಮನಿಸಬಹುದು.

ಇಂದಿನ ಮಾಧ್ಯಮಗಳು ಹಾಗೂ ಶಿಕ್ಷಣ ಕೇಂದ್ರಗಳು ಸೌಂದರ್ಯದ ಬಗ್ಗೆ ಅಪಾರ ಕಾಳಜಿ ಹಾಗೂ ಹಲವು ಸ್ತರಗಳನ್ನು ಪರಿಚಯಿಸುತ್ತಿವೆ. ಆದರೆ ಬ್ಯೂಟಿ ಪಾರ್ಲರ್‍ ಎಂಬ ಪಾಶ್ಚಿಮಾತ್ಯ ಕೊಡುಗೆ ಮುಂದೆ ಸಮಾಜವನ್ನು ಯಾವ ರೀತಿ ಬದಲಾಯಿಸುತ್ತದೆ ಎಂಬುದನ್ನು ಮುಂದಿನ ಕಾಲಘಟ್ಟವೇ ನಿರ್ಧರಿಸಲಿದೆ.

ಒಟ್ಟಿನಲ್ಲಿ ನನ್ನ ಅಬಿಪ್ರಾಯ ಬ್ಯೂಟಿ ಪಾರ್ಲರ್‍ಗಳು ಬೇಡ ಎಂಬುದಲ್ಲ. ಇದರಿಂದಾಗಿ ಹಳ್ಳಿ ಹಾಗೂ ನಗರದ ಮಹಿಳೆಯರಲ್ಲಾಗುವ ಮಾನಸಿಕ ಚಂಚಲತೆ ಹಾಗೂ ಸೌಂದರ್ಯ ವಿಚಾರತದಲ್ಲಿನ ತಾರತಮ್ಯ ಕುರಿತಾಗಿದೆ. ಇದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎನಿಸುತ್ತಿದೆ. ಏಕೆಂದರೆ ನನಗೆ ಗೊತ್ತಿಲ್ಲದೆ ನನ್ನ ಕುಟುಂಬ, ವಠಾರ ಹಾಗೂ ಸರಿಕರು ಇದಕ್ಕೆ ಹೊರತಲ್ಲ. ಅಥವಾ ಇದು ಇಂದಿನ ಜೀವನಕ್ಕೆ ಅನಿವಾರ್ಯವೂ ಇರಬಹುದು.

- ಬಾಲರಾಜ್ ಡಿ. ಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet