ಸ್ಕಂದ ಸ್ವಾಮಿ ರಕ್ಷಿಸು
ಕವನ
ಪರಶಿವನ ಆತ್ಮಜನೆ ಷಣ್ಮಖ ಸ್ವಾಮಿಯೇ/
ದುರಿತಗಳ ಪರಿಹರಿಸು ಕಾರ್ತಿಕೇಯನೇ//
ಸುಬ್ರಹ್ಮಣ್ಯದಲಿ ನೆಲೆನಿಂತ ಸುಬ್ಬಪ್ಪನೇ/
ಭಕ್ತರು ನಮಿಪರು ನಿನ್ನಂಘ್ರಿಗೆ ಸ್ಕಂದನೇ//
ದುಷ್ಟ ತಾರಕನ ಅಟ್ಟಹಾಸವ ಮೆಟ್ಟಿದವನೇ/
ಕಷ್ಟಗಳ ನಿವಾರಿಸಿ ಅನವರತ ಪೊರೆಯುವವನೇ//
ಪೂಜೆ ಉಪವಾಸ ವ್ರತ ನೇಮ ನಾಗರಾಜನೇ/
ಹಾಲು ಮೊಸರು ತುಪ್ಪ ಹೂಗಳ ನೈವೇದ್ಯ ಗೊಂಬವನೇ //
ಬ್ರಹ್ಮ ರಥೋತ್ಸವ ಪಲ್ಲಕ್ಕಿ ಮೆರವಣಿಗೆ ವಿಶೇಷನೇ/
ಕರ್ಮಗಳ ನಿವಾರಿಸಿ ಹರಸಿ ಪೊರೆಯುವವನೇ//
ಪಲ್ಲಪೂಜೆ ಬೀದಿ ಮೆರವಣಿಗೆ ವೈಭವ ಗುಹನೇ/
ಚಂಪಾ ಷಷ್ಠಿಯಲಿ ವಿಜೃಂಭಿಸುವ ಮಯೂರವಾಹನನೇ//
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
