ಸ್ಟೇಟಸ್ ಕತೆಗಳು (ಭಾಗ ೧೦೪೦)- ಹೀಗೂ…
ಆಡಿಷನ್ಸ್ ಜೋರಾಗಿದೆ. ಸರತಿ ಸಾಲು ತುಂಬಾ ದೊಡ್ಡದಿದೆ. ಕೆಲವರಿಗೆ ಒಳ ಪ್ರವೇಶ, ಹಲವರಿಗೆ ನಿರ್ಗಮನ.
"ಬನ್ನಿ ಸರ್ ತುಂಬಾ ಚೆನ್ನಾಗಿ ಹಾಡ್ತೀರಾ, ಕುಣೀತೀರಾ ಆಭಿನಯಿಸ್ತೀರಾ, ನೀವು ಎಲ್ಲೋ ಇರ್ಬೇಕಿತ್ತು. ಇಷ್ಟು ದಿನ ಯಾಕೆ ನಮ್ಮ ಕಣ್ಣಿಗೆ ಬಿದ್ದಿಲ್ಲ, ನಿಮ್ಮ ಆಯ್ಜೆ ಖಂಡಿತಾ, ಆದರೆ ನೀವು ನಮ್ಮಲ್ಲಿ ಬರುವಾಗ ಹೇಳುವುದ್ದಕ್ಕೆ ಒಂದಷ್ಟು ನೋವಿನ ಕತೆಗಳಿರಬೇಕು, ನಿಮ್ಮ ಮಾತು ಎಲ್ಲರ ಹೃದಯವನ್ನ ದ್ರವಿಸಬೇಕು," "ಇಲ್ಲ ಸರ್ ನನ್ನಲ್ಲಿ ನೋವಿನ ಕತೆಗಳಿಲ್ಲ, ಅಲ್ಲದೆ ನನ್ನ ನೋವಿನ ಕತೆಗಳು ವೇದಿಕೆಯಲ್ಲಿ ಪ್ರದರ್ಶನಕ್ಕೆ ಇಟ್ಟದ್ದಲ್ಲ "
"ಹಾಗಾದರೆ ನಿಮ್ಮ ಪ್ರತಿಭೆಗೆ ನಮ್ಮಲ್ಲಿ ಅವಕಾಶವಿಲ್ಲ."
" ಸರ್ ನಾನಿಲ್ಲಿ ನನ್ನ ಪ್ರತಿಭೆಯನ್ನ ಪ್ರದರ್ಶನ ಮಾಡೋದು ಬೇಡವಾ?"
" ಅದು ಬೇಕು ಅದಕ್ಕಿಂತಲೂ ನಿಮ್ಮಕಣ್ಣೀರು ಮುಖ್ಯ"
"ಇಲ್ಲ ಸರ್ ಆಗೋದಿಲ್ಲ."
"ನಮ್ಮಲ್ಲಿ ಅವಕಾಶವಿಲ್ಲ"
ಸರತಿ ಸಾಲು ಉದ್ದ ಇನ್ನಷ್ಟು ಬೆಳೆಯುತ್ತಿದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ