ಸ್ಟೇಟಸ್ ಕತೆಗಳು (ಭಾಗ ೧೦೬೧)- ಒಳಮಾತು
ದಿನಗಳು ಹೇಗೆ ದಾಟಿದವಲ್ಲಾ ತಿಳಿಲೇ ಇಲ್ಲ. ಕನಸು ಕಂಡು ವರ್ಷಗಳು ದಾಟಿತ್ತು. ನನಸು ಮಾಡುವ ಛಲವಿತ್ತು. ಎಲ್ಲವೂ ಕೂಡಿ ಬರಬೇಕಿತ್ತು. ಅಡತಡೆಗಳನ್ನ ದಾಟಿ ಒಪ್ಪಿಗೆ ಪಡೆದು ಗುರಿಯ ಕಡೆಗೆ ಸಾಗುವ ಕ್ಷಣಕ್ಕಾಗಿ ಕಾಯುತ್ತಿರುವ ರಸಿನಿಮಿಷಗಳಿಗೆ ತಲೆ ತಗ್ಗಿಸಿ ಕಾಯುತ್ತಿದ್ದೇನೆ. ಎಲ್ಲಾ ಕನಸುಗಳು ನೆರವೇರುತ್ತವೆ. ತಾಳ್ಮೆ ಬೇಕು. ಇನ್ನು ಜವಾಬ್ದಾರಿಗಳ ಜೊತೆ ಹೆಜ್ಜೆ ಹಾಕಬೇಕು. ನಂಬಿಕೆ ಉಳಿಸಬೇಕು. ಪ್ರೀತಿ ಹಂಚಬೇಕು. ದೊಡ್ಡ ಗುರಿಯ ಕಡೆಗೆ ಜತೆಯಿಂದ ಹೆಜ್ಜೆ ಇಡಬೇಕು. ಉತ್ತರ ಕೊಡುವುದಿದೆ ಆಡಿಕೊಂಡವರಿಗೆ ಅದಕ್ಕೆ ನಂಬಿಕೆ ಗಟ್ಟಿಯಾಗಲಿ ಛಲ ಇರಲಿ ವಿಶ್ವಾಸ ಇರಲಿ. ಭಗವಂತನ ಆಶೀರ್ವಾದ ಜೊತೆಗಿರಲು ಭಯವೇಕೆ. ಅದೇ ನಂಬಿಕೆಯಲ್ಲಿ ಮುಂದುವರಿಯುತ್ತಿದ್ದೇನೆ....ಹಾಗೇ ಒಬ್ನೇ ಕುಳಿತವನ ಮನಸ್ಸಿನ ಮಾತುಗಳು ಹೊರಗೆ ಬರುತ್ತಿದ್ದವು.... ನಿಮ್ಮ ಮಾತುಗಳು ಹೀಗೆ ಬರುತ್ತವೆ... ಒಮ್ಮೆ ಒಬ್ಬಂಟಿಯಾಗಿ ಒಳಗಿಳಿದು ಮಾತನಾಡಿ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ