ಸ್ಟೇಟಸ್ ಕತೆಗಳು (ಭಾಗ ೧೦೬೭)- ಬಳಗ
ಬಿಲವೊಂದು ತುಂಬಾ ಸಣ್ಣದು. ಒಳಗೆ ನುಸುಳಿ ಹೊರಗೆ ಬರುವುದ್ದಕ್ಕೆ ಸಾದ್ಯವಿಲ್ಲದ್ದಷ್ಟು. ನಮ್ಮ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ಬಿರುಕು ಬಿಟ್ಟ ಜಾಗವದು. ಆ ದಿನ ಸಣ್ಣ ಹಾವಿನ ಮರಿಯೊಂದು ಅಲ್ಲೇ ಸುಳಿದಾಡುತ್ತಿತ್ತು. ಅದನ್ನ ಹೊರಗೆ ಕಳುಹಿಸುವುದ್ದಕ್ಕೆ ತುಂಬಾ ಪ್ರಯತ್ನ ಪಟ್ಟರೂ ಸಾದ್ಯವಾಗಲೇ ಇಲ್ಲ. ಹಾವಿನ ಮರಿಗೆ ಗಾಯವಾಗಿದೆಯೋ ಅಥವಾ ಹೊಟ್ಟೆಯೊಳಗೆ ತುಂಬಿಕೊಂಡದ್ದು ಕರಗುತ್ತಿಲ್ಲವೋ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಹಾವು ಚಡಪಡಿಸುತ್ತಿದೆ. ಕ್ಷಣದಲ್ಲಿ ಸುದ್ದಿ ಹೇಗೆ ರವಾನೆಯಾಯಿತೋ ಗೊತ್ತಿಲ್ಲ. ಅದೇ ಹಾವಿನ ಜಾತಿಯ ಬಳಗವಲ್ಲಿ ಒಟ್ಟಾಯಿತು. ಏನು ಮಾತಾಡಿದವೋ, ಮೋಡಿ ಮಾಡಿದವೋ ನಾಕಾಣೆ. ಆ ಕಷ್ಟದ ಪರಿಸ್ಥಿತಿಯಲ್ಲಿ ಇದ್ದ ಹಾವಿನ ಮರಿಯನ್ನ ಎಲ್ಲವೂ ಸೇರಿ ಅಲ್ಲಿಂದ ಪಾರು ಮಾಡಿ ತಮ್ಮ ಜೊತೆಗೆ ಕರೆದೊಯ್ದವು. ನನಗೆ ಇದಕ್ಕಿಂತ ದೊಡ್ಡ ಪಾಠ ಬೇಕಿರಲಿಲ್ಲ. ಕಲಿತೇ ಬಿಟ್ಟೆ ಬದುಕಿನಲ್ಲಿ ಜೊತೆಯಾಗಬೇಕಾದ ಅನಿವಾರ್ಯತೆಯನ್ನ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ