ಸ್ಟೇಟಸ್ ಕತೆಗಳು (ಭಾಗ ೧೦೮೨)- ಸಮಸ್ಯೆ
ಅವನು ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡಿದ್ದಾನೆ. ಅದರಲ್ಲಿ ಅವನು ಪರಿಹಾರ ಮಾಡಬೇಕಾಗಿರುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನು ತಯಾರು ಮಾಡ್ತಾ ಇದ್ದಾನೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಹುಡುಕಿ ತಾನು ನೆಮ್ಮದಿಯಾಗಿರಬೇಕು ಅಂತ ಬಯಸ್ತಾ ಇದ್ದಾನೆ. ಆದರೆ ಒಂದು ದಿನವೂ ಪಟ್ಟಿ ಪೂರ್ತಿಯಾಗಿ ಮುಗಿಯೋದೇ ಇಲ್ಲ. ತನ್ನ ಗೆಳೆಯನಲ್ಲಿ ಇದರ ಬಗ್ಗೆ ಮಾತನಾಡುವುದ್ದಕ್ಕೆ ಪ್ರಾರಂಭ ಮಾಡಿದ. ಅದಕ್ಕೆ ಗೆಳೆಯ "ನೀನು ದಾರಿಯಲ್ಲಿ ಹೋಗುತ್ತಿರುವಾಗ ಯಾವುದೋ ಜನರಿಗೆ ಹಾನಿ ಮಾಡುವ ವಸ್ತು ಒಂದು ಜನರಿಲ್ಲದ ಪ್ರದೇಶದಲ್ಲಿ ಬಿದ್ದಿರುವುದನ್ನು ಕಂಡು, ಅದರಿಂದ ಮುಂದೆ ಏನಾದರೂ ತೊಂದರೆ ಆಗಬಹುದು ಅಂತ ಭಾವಿಸಿ ಅದನ್ನ ಹೊತ್ತುಕೊಂಡು ಹೋಗಿ ಯಾರಿಗಾದರೂ ನೀಡಬೇಕು ಅನ್ನೋ ಕಾರಣಕ್ಕೆ ದೊಡ್ಡ ಜನರ ಸಮುದಾಯದ ಮಧ್ಯದಲ್ಲಿ ನುಗ್ಗಿ ಬಿಟ್ರೆ ಅದರಿಂದ ಅಪಾಯ ಹೆಚ್ಚಾಗುತ್ತೆ ಹೊರತು ಕಡಿಮೆಯಾಗುವುದಿಲ್ಲ .ಹಾಗೆಯೇ ನಿನ್ನ ಸಮಸ್ಯೆಗಳ ಪಟ್ಟಿಯಲ್ಲಿ ಸರಿಯಾಗಿ ಗಮನಿಸಿ ನೀನಾಗಿಯೇ ಪರಿಹಾರ ಮಾಡಬೇಕಾಗಿರುವ ಸಮಸ್ಯೆಗಳು ಯಾವುದು? ನಿನ್ನ ಹೊರತು ಹಲವಾರು ಜನ ಆ ಸಮಸ್ಯೆಗಳನ್ನು ಪರಿಹಾರ ಮಾಡಬಹುದಾ ಅಂತಾ? ಆ ಎರಡು ಪಟ್ಟಿಗಳು ಸಿದ್ಧವಾದಾಗ ನಿನ್ನದು ಅಂತ ನಿಗದಿಯಾಗಿರುವುದನ್ನ ಮಾತ್ರ ಪರಿಹಾರ ಮಾಡಿದ್ರೆ ಸಾಕು, ಅದೆಲ್ಲದೆ, ಯಾವುದನ್ನ ಯಾವ ದಿನದ ಒಳಗೆ ಪರಿಹಾರ ಮಾಡಬೇಕು ಅನ್ನೋ ಪಟ್ಟಿಸಿದ್ದವಾಗಿ ಬಿಟ್ಟರೆ ಯಾವುದನ್ನು ಯೋಚನೆ ಮಾಡಬೇಕಾದ ಸ್ಥಿತಿಯೇ ನಿರ್ಮಾಣ ಆಗೋದಿಲ್ಲ. ಅಂತಂದು ಹೊರಟೆ ಬಿಟ್ಟ. ಇವನು ಮತ್ತೆ ಪುಸ್ತಕ ಹಿಡಿದು ತನ್ನದು ಸ್ವಂತದ್ದು ಸ್ವಂತವಲ್ಲದ ಸಮಸ್ಯೆಗಳನ್ನು ಮತ್ತೆ ಬರೆಯುವುದಕ್ಕೆ ಆರಂಭ ಮಾಡಿದ...ಆದರೂ ಪಟ್ಟಿ ಮುಗಿಯುತ್ತಿಲ್ಲ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ