ಸ್ಟೇಟಸ್ ಕತೆಗಳು (ಭಾಗ ೧೦೯೪)- ಚಿನ್ನ

ಸ್ಟೇಟಸ್ ಕತೆಗಳು (ಭಾಗ ೧೦೯೪)- ಚಿನ್ನ

ಬದುಕೆಂಬ ಚಿನ್ನದ ಅಂಗಡಿಯ ಕಥೆಯನ್ನು ನಿಮ್ಮ ಮುಂದೆ ಹೇಳುತ್ತೇನೆ. ಆ ಅಂಗಡಿಗೆ ಜನ ಬರೋದಕ್ಕೆ ಅಲ್ಲಿ ಬರೀ ಚಿನ್ನವನ್ನು ಇಟ್ರೆ ಸಾಕಾಗುವುದಿಲ್ಲ .ಅದನ್ನು ಒಪ್ಪ ಓರಣವಾಗ ಜೋಡಿಸಬೇಕು. ಒಳಗೊಂದಷ್ಟು ಬೆಳಕಿನ ವಿನ್ಯಾಸ ಮಾಡಬೇಕು. ವಿವಿಧ ರೀತಿಯ ಆಕರ್ಷಣೆಗಳನ್ನು ಮಾಡಿದರೆ ಮಾತ್ರ ಜನ ಹತ್ತಿರ ಬರುತ್ತಾರೆ. ಹೀಗೆ ಚಿನ್ನದ ಅಂಗಡಿ ಒಳಗೆ ಒಂದು ಕಡೆ ಸಾಗಿಬಿಟ್ಟಿದೆ. ಅಲ್ಲಿ ಚಿನ್ನಕ್ಕಿಂತ ಬೆಳ್ಳಿ ಏನಾದರೂ ತೆಗೆದುಕೊಳ್ಳೋಣ ಅಂತ ಹೋದರೆ ಅದನ್ನು ಕೊಡುವವನಿಗೂ ಅಷ್ಟೇನು ಆಸಕ್ತಿಯಿದ್ದಂತೆ ಕಾಣಲಿಲ್ಲ. ಏನೋ ಕೊಡಬೇಕಲ್ಲ ಅನ್ನುವ ಕಾರಣಕ್ಕೆ ನಿರಾಸದಾಯಕವಾಗಿ ಒಂದಷ್ಟು ಕೊಡುತ್ತಿದ್ದ.  ಅದೇ ಚಿನ್ನ ವಜ್ರವನ್ನ ತೋರಿಸುವವರ ಆಸಕ್ತಿ ತುಂಬಾ ಹೆಚ್ಚಾಗಿ ಇನ್ನೊಂದಷ್ಟು ಹೆಚ್ಚನ್ನ ಮಾರಾಟ ಮಾಡುವ ಉಸ್ತುಕತೆ ಅವರಲ್ಲಿ ಕಾಣುತ್ತಿತ್ತು. ಚಿನ್ನಕ್ಕಿದ್ದ ಆಸಕ್ತಿ ಬೆಳ್ಳಗಿರಲಿಲ್ಲ. ಹಾಗೆ ಬದುಕಲ್ಲಿ ನಾವು ಎಲ್ಲರ ಮುಂದೆ ಬೆಳ್ಳಿಯಾಗಿಬಿಟ್ಟರೆ ನಮ್ಮನ್ನ ಯಾರು ಗಮನಿಸೋದೇ ಇಲ್ಲ. ನಾವು ಚಿನ್ನವು ಆಗಬೇಕು, ವಜ್ರವೂ ಆಗಬೇಕು. ಹಾಗಾದಾಗ ಜನ ನಮ್ಮ ಬಳಿ ಬರ್ತಾರೆ ನಮ್ಮನ್ನ ಒಪ್ಪಿಕೊಳ್ಳುತ್ತಾರೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ