ಸ್ಟೇಟಸ್ ಕತೆಗಳು (ಭಾಗ ೧೦೯೫)- ನಾಯಿ ಪಾಠ
ಮನೆಯ ನಾಯಿ ಸ್ವಲ್ಪ ಹೆಚ್ಚು ಬುದ್ಧಿವಂತನಾಗಿದ್ದಾನೆ. ಮೊದಮೊದಲು ಆತ ನಾವು ಹಾಕೋದನ್ನೇ ಕಾಯ್ತಾ ಇದ್ದ. ಇವನು ನಾವು ಸಾಕಿದವನಲ್ಲ. ಎಲ್ಲೋ ಇದ್ದಾವ. ನಮ್ಮ ಮನೆಯ ಅಂಗಳಕ್ಕೆ ಬಂದು ಹಾಕಿದ್ದನ್ನೆಲ್ಲಾ ತಿನ್ನುತ್ತಾ ಇದ್ದ. ನಾವು ವಿಧವಿಧವಾದ ಊಟ ತಿಂಡಿಗಳನ್ನ ಹಾಕುವುದನ್ನು ತಿಂದೋ ಏನೋ ಆತನ ವರ್ತನೆಗಳು ಬದಲಾದವು. ನಾವು ಅಂಗಳಕ್ಕೆ ಕಾಲಿಟ್ಟರೆ ಎಲ್ಲಿದ್ದರೂ ಓಡಿ ಬರ್ತಾನೆ. ಆದರೆ ನಾವು ಹಾಕುವ ಆಹಾರಕ್ಕಾಗಿ ಆತ ಕಾಯ್ತಾ ಕೂರುವುದಿಲ್ಲ. ಹಸಿವಾದಾಗ ಸುತ್ತಮುತ್ತ ಓಡಾಡ್ತಾನೆ. ಎಲ್ಲೋ ತಿನ್ನುವುದು ಸಿಗ್ತದೆ ಆತನಿಗೂ ಗೊತ್ತಿದೆ. ನನಗೆ ಅಗತ್ಯವಾದದ್ದನ್ನ ನಾನು ಹುಡುಕಿಯೇ ಪಡೆದುಕೊಳ್ಳಬೇಕು ಯಾರನ್ನು ಅವಲಂಬಿಸಿರಬಾರದು. ಹಾಗಾಗಿ ಎಂದಿಗಿಂತ ಈಗ ಆತ ಹೆಚ್ಚು ಖುಷಿಯಿಂದ ಇದ್ದಾನೆ...ನಾಯಿ ಪಾಠ ನಮಗೆ ಅರ್ಥವಾಗುವುದು ಯಾವಾಗ ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ