ಸ್ಟೇಟಸ್ ಕತೆಗಳು (ಭಾಗ ೧೦೯೬)- ವಾದ
ಅಜ್ಜನಿಗೆ ಮೊಮ್ಮಗನಿಗೂ ಮಾತುಕತೆ ನಡೆದಿತ್ತು. ನಿಮ್ಮ ಕಾಲ ಚೆನ್ನಾಗಿತ್ತು. ಒಪ್ಪಿಕೊಳ್ಳುತ್ತೇನೆ ಆದರೆ ನಮ್ಮ ಈ ಕಾಲದಲ್ಲಿ ಈ ಮೀಡಿಯಾಗಳು ಬಂದಿರುವುದರಿಂದ ಜನರಿಗೆ ಸತ್ಯ ಅರಿವಾಗ್ತಾ ಇದೆ. ಎಲ್ಲ ವಿಷಯಗಳು ಬಹಳ ಬೇಗ ತಲುಪುತ್ತವೆ. ತಪ್ಪು ಮಾಡುವವರಿಗೆ ಹೆದರಿಕೆ ಉಂಟಾಗಿದೆ. ಹಾಗಾಗಿ ನಿಮ್ಮ ಕಾಲಕ್ಕಿಂತ ನಾವು ಮುಂದುವರೆದಿದ್ದೇವೆ ತಾನೆ?"
ಆಯ್ತು ನೀನು ಹೇಳುವ ಮಾತನ್ನ ಒಪ್ಪಿಕೊಳ್ಳುತ್ತೇನೆ, ಆದರೆ ಈಗಿನ ಮೀಡಿಯಾಗಳ ತರ ಹಿಂದೆ ಸುದ್ದಿಗಳನ್ನು ಮನಸ್ಸಿನೊಳಗೆ ತುಂಬಿಕೊಂಡು ವಿಚಾರ ಸರಿ ತಪ್ಪುಗಳನ್ನ ಅಳೆದು ತೂಗಿ ಹೋಗಿ ಹಂಚುತ್ತಿದ್ದರು. ಮನಸ್ಸಿನ ಮೀಡಿಯಾ ತುಂಬಾ ಗಟ್ಟಿಯಾಗಿತ್ತು. ಎಲ್ಲವನ್ನು ಒಳಗೆ ತುಂಬಿಸಿಕೊಂಡು ಹೆಚ್ಚು ಸಮಯದವರೆಗೆ ಉಳಿಸಿಕೊಳ್ಳುವ ಎಲ್ಲ ತಂತ್ರಜ್ಞಾನವು ಮನಸ್ಸಿನೊಳಗಿತ್ತು. ಈಗ ಹೊರಗಿನ ಮೀಡಿಯಾ ಬಂದ ದಿನದಿಂದ ತನ್ನೊಳಗೆ ಮರೆತು ಹೊರಗಿನ ಮೀಡಿಯಾವನ್ನು ಅವಲಂಬಿಸಿ ವ್ಯಕ್ತಿ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾನೆ. ನಿನಗಿದು ಅರ್ಥವಾಗಿಲ್ಲ ಅರ್ಥವಾಗುವುದೂ ಇಲ್ಲ. ಮೊಮ್ಮಗನೋ ಒಪ್ಪಿಕೊಳ್ಳುವ ಜಾಯಮಾನದವನಲ್ಲ... ಮುಂದುವರೆದಿತ್ತು ಮಾತುಕತೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ