ಸ್ಟೇಟಸ್ ಕತೆಗಳು (ಭಾಗ ೧೦೯೭)- ದುಷ್ಟ ಕೂಟ

ಸ್ಟೇಟಸ್ ಕತೆಗಳು (ಭಾಗ ೧೦೯೭)- ದುಷ್ಟ ಕೂಟ

ಚರ್ಚೆ ತುಂಬಾ ಜೋರಾಗಿತ್ತು ಈಗ ಸಿಕ್ಕಿರುವ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಈ ಕೆಲಸ ನಮ್ಮಿಂದಾದರೆ ಇನ್ನು ಮುಂದೆ ರಾಜ್ಯದಲ್ಲಿ ರಾಷ್ಟ್ರದಲ್ಲಿ ನಮ್ಮ ಹೆಸರು ವ್ಯಾಪಿಸಿ ಹೆಚ್ಚು ಹೆಚ್ಚು ದುಡ್ಡು ಕಮಾಯಿಸುವ ಎಲ್ಲಾ ದಾರಿಗಳು ಇದರಿಂದ ತೆರೆದುಕೊಳ್ಳುತ್ತವೆ. ಯಾರೋ ಒಬ್ಬ ಲಾರಿಯ ಸಮೇತ ಮಣ್ಣಿನಡಿಗೆ ಹೋಗಿ ಸಿಲುಕಿಕೊಂಡಿದ್ದಾನೆ. ಆತನನ್ನು ಮೇಲೆತ್ತುವ ಕೆಲಸವಾಗಬೇಕಾಗಿದೆ. ಎಲ್ಲರೂ ತುಂಬಾ ಪ್ರಯತ್ನಪಟ್ಟಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ನಮ್ಮಿಂದಲೂ ಇದು ಸಾಧ್ಯವಾಗುವುದಿಲ್ಲ .ಆದರೆ ಯಾರೋ ಒಬ್ಬ ಪುಣ್ಯಾತ್ಮ ತುಂಬಾ ಶ್ರಮವಹಿಸಿ ರಾತ್ರಿ ಹೆಗಲನ್ನದೆ ತನ್ನ ಜೀವವನ್ನು ಪಣಕ್ಕಿಟ್ಟು ಸ್ಥಳಗಳನ್ನು ಗುರುತಿಸಿದ್ದಾನೆ. ಒಂದಷ್ಟು ವಸ್ತುಗಳನ್ನು ಗುರುತಿಸಿದ್ದಾನೆ. ನಾವೀಗ ಮಾಡಬೇಕಾಗಿರೋದು ಆ ಕೆಲಸ ನಮ್ಮಿಂದ ಆಗಿದೆ ಅಂತ ಸಮಾಜದ ಮುಂದೆ ತೆರೆದಿಟ್ಟರೆ ಸಾಕು, ಒಂದಷ್ಟು ಖರ್ಚಾಗುತ್ತೆ ಒಂದಷ್ಟು ಕೈಬಿಸಿ ಮಾಡಬೇಕಾಗುತ್ತೆ, ಮುಂದೆ ಆಗಬೇಕಾಗಿರುವ ದೊಡ್ಡ ಹೆಸರಿನ ಮುಂದೆ ಇದು ಯಾವುದೂ ಲಕ್ಷಕ್ಕೆ ಸಿಗೋದಿಲ್ಲ. ಹಾಗಾಗಿ ಆ ಕೆಲಸದ ಕಡೆಗೆ ನೀವೆಲ್ಲ ಶ್ರಮವಹಿಸಿ. ನಾನು ದೊಡ್ಡವರ ಬಳಿ ಮಾತನಾಡಿ ಆತನನ್ನು ದೂರಸರಿಸುತ್ತೇನೆ. ಆತನ ಕೆಲಸ ನಮ್ಮ ಹೆಸರು. ಮುಂದೆ ಹೆಚ್ಚು ದುಡ್ಡು ಸಂಪಾದನೆ ಮಾಡುವ ಮಾರ್ಗವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಎಲ್ಲರ ಮುಖದಲ್ಲೊಂದು ವಿಕೃತ ನಗು ಮೂಡಿ ಮರೆಯಾಯಿತು. ದುಷ್ಟ ಕೂಟ ಒಂದು ಬಾಗಿಲನ್ನು ತೆರೆದು ಹೊರಬಂದಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ