ಸ್ಟೇಟಸ್ ಕತೆಗಳು (ಭಾಗ ೧೧೦೬)- ಬದುಕು

ಸ್ಟೇಟಸ್ ಕತೆಗಳು (ಭಾಗ ೧೧೦೬)- ಬದುಕು

ಬೇಗ ಬೇಗ ಬಸ್ಸು ಹತ್ತಿ ,ಏನು ನಮ್ಮ ಬಸ್ ಮಾತ್ರ ಇರೋದಾ? ಇದರ ನಂತರ ತುಂಬಾ ಬಸ್ಸುಗಳಿದ್ದಾವೆ. ಇದರ ನಂತರ ಬಸುಗಳಿದ್ದಾವೆ ಎಲ್ಲಿ ಮುಂದೆ ಹೋಗ್ರಿ ಅಲ್ಲೇ ಇಷ್ಟು ಹೊತ್ತು ಅಂತ ನಿಂತಿರಿ. ಮನೆಯಲ್ಲಿ ಕೆಲಸ ಇಲ್ಲ ಅಂತ ಬಸ್ಸಲ್ಲಿ ಬರ್ತಾರೆ"

"ಸರ್ ನಿಧಾನ ಬನ್ನಿ, ಏನು ತೊಂದರೆ ಇಲ್ಲ ನಾವು ಕಾಯುತ್ತೇವೆ, ಎಲ್ಲರಿಗೂ ಕುಳಿತುಕೊಳ್ಳುವುದಕ್ಕೆ ಸೀಟು ಸಿಗುತ್ತದೆ ಅಂತ ನಾ ಹೇಳುವುದಕ್ಕೆ ಆಗುವುದಿಲ್ಲ. ಮುಂದೆ ಮುಂದೆ ಹೋಗಿ ಸರ್"

"ನಮಸ್ಕಾರ ಹಾಗೆ , ನಿಧಾನವಾಗಿ ಒಳಗೆ ಬನ್ನಿ ಯಾವೂರಿಗೆ ಹೋಗಬೇಕು, ನಾವು ಮೈಸೂರು ಕಡೆ ಹೊರಟಿದ್ದೇವೆ. ಚಿಲ್ಲರೆ ಇಲ್ಲ ಅಂತ ಯೋಚನೆ ಮಾಡಬೇಡಿ, ನಾನು ಕೊಡುತ್ತೇನೆ . ತುಂಬಾ ಖುಷಿಯಿಂದ ಆರಾಮಾಗಿ ಹೋಗಿ. ಈ ದಿನವನ್ನು ಎಂಜಾಯ್ ಮಾಡಬೇಕು ಸರ್ ಹಾಗೆ ಬದುಕ್ತಾ ಇರಬೇಕು ಕಾಲವನ್ನು ತಡೆಯುವವರು ಯಾರು ಇಲ್ಲ ಹಾಡು ಮುಂದುವರಿತಾ ಇತ್ತು.

ಒಂದು ದಿನದ ಪಯಣದಲ್ಲಿ ಕಣ್ಣಿಗೆದುರಾದ ಮೂರು ಜನ ನಿರ್ವಾಹಕರು, ಅವರವರ ಕೆಲಸವನ್ನು ನಿರ್ವಹಿಸುತ್ತಿದ್ದರು. ಕೆಲಸ ಒಂದೇ ಆದರೂ ಬದುಕುವ ರೀತಿ ಬೇರೆ ನಾವು ಕೂಡ ನಮ್ಮ ಬದುಕನ್ನ ಸಂಭ್ರಮಿಸಿದ್ರೆ ಬದುಕು ನಮಗೆ ಸಂಭ್ರಮವನ್ನು ನೀಡುತ್ತದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ