ಸ್ಟೇಟಸ್ ಕತೆಗಳು (ಭಾಗ ೧೧೦೯)- ಕಾಲ
ಅಪ್ಪ ನಾವಿರುವಲ್ಲಿಗೆ ಅಗತ್ಯವಿರುವವರು ಹುಡುಕಿಕೊಂಡು ಬರಬೇಕು ಅದು ನಮ್ಮ ನಿಜವಾದ ವ್ಯಾಪಾರ, ಹಾಗಿದ್ದಾಗ ನಾವು ಬೆಳೆಯುತ್ತೇವೆ,
" ಇಲ್ಲ ಮಗಾ ನಾನು ಇದನ್ನು ನಂಬೋದಿಲ್ಲ, ನಾವು ಜನರಿದ್ದಲ್ಲಿಗೆ ಅವರ ಅಗತ್ಯವನ್ನು ತಿಳಿದು ಹೋಗಿ ನೀಡಬೇಕು. ತಂದೆ ಮತ್ತು ಮಗನ ನಡುವೆ ಹೀಗೆ ವಾದ ಮುಂದುವರಿತಾನೆ ಇತ್ತು. ಮೊದಲ ಒಂದಷ್ಟು ಸಮಯ ಅಪ್ಪನ ಮಾತಿನಂತೆ ಜನರಿದ್ದಲ್ಲಿ ಆ ವಸ್ತುವಿನ್ನ ಸಾಗಿಸುತ್ತಿದ್ದರು, ಅದರ ಅಗತ್ಯತೆಯ ಬಗ್ಗೆ ಅರಿವಾದ ನಂತರ ಜನ ಅಂಗಡಿಗೆ ಬರೋದ್ದಕ್ಕೆ ಆರಂಭವಾಯಿತು. ಇಬ್ಬರ ಮಾತು ಸತ್ಯವಾಗಿತ್ತು. ಈ ವಾದ ಹುಟ್ಟುವುದಕ್ಕೆ ಕಾರಣ ಅಂತಂದ್ರೆ, ಆ ದಿನ ವ್ಯಾಪಾರ ಸ್ವಲ್ಪ ಜೋರಾಗಿತ್ತು. ಅಂಗಡಿಗೆ ಬಂದ ಗ್ರಾಹಕರಲ್ಲಿ ಮಗ ಕುರ್ಚಿಯಲ್ಲಿ ಕುಳಿತು ವಿಚಾರಿಸಿ ಅಗತ್ಯವಾದ ಮಾತ್ರ ನೀಡಿ ಕಳುಹಿಸುತ್ತಿದ್ದ. "ಗ್ರಾಹಕರಿಗೆ ಎದ್ದು ನಿಂತು ಗೌರವ ನೀಡಬೇಕು, ಅವರ ಕುಶಲೋಪರಿ ವಿಚಾರಿಸಬೇಕು. ನಮ್ಮ ಬಳಿ ಮತ್ತೆ ಬರುವಂತೆ ಪ್ರೇರೇಪಿಸಬೇಕು, ನಾವು ಅವರನ್ನು ತುಂಬಾ ಗೌರವಿಸುತ್ತೇವೆ ಆದರೆ ಅನ್ನುವ ಭಾವ ಅವರಲ್ಲಿ ಮೂಡಬೇಕು. ಅವರಿಗೆ ಒಂದಷ್ಟು ವಿಶೇಷವಾದ್ದನ್ನ ನೀಡಬೇಕು. ಹೀಗಾದಾಗ ಮಾತ್ರ ವ್ಯಾಪಾರ ವೃದ್ಧಿಸುತ್ತದೆ. ಇದು ಅರ್ಥವಾಗುವುದಕ್ಕೆ ಇನ್ನೊಂದಷ್ಟು ವರ್ಷಗಳ ಅಗತ್ಯ ಇದೆ ಅನ್ನೋದು ತಂದೆಗೆ ಗೊತ್ತಿದ್ದರೂ ಸಹ ಅವರು ಮೌನವಾಗಿದ್ದರು... ಕಾಲವೇ ಉತ್ತರ ನೀಡಬೇಕಾಗುತ್ತದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ