ಸ್ಟೇಟಸ್ ಕತೆಗಳು (ಭಾಗ ೧೧೧೭)- ಹನಿ

ಸ್ಟೇಟಸ್ ಕತೆಗಳು (ಭಾಗ ೧೧೧೭)- ಹನಿ

ಆ ನೀರ ಹನಿಗೆ ತುಂಬಾ ಬೇಸರವಾಗಿತ್ತು. ಬೇಜಾರು ಅಂದ್ರೆ ಅಷ್ಟು ಇಷ್ಟ ಅಲ್ಲ. ತನಗೆ ತನ್ನದೇ ಆದ ಒಂದು ಅದ್ಭುತ ಸ್ವರೂಪವಿಲ್ಲ, ಬರಿಯ ಹನಿಯಾಗಿ ಬದುಕ್ತಾ ಇದ್ದೇನೆ. ನನ್ನಿಂದ ದೊಡ್ಡದೇನೋ ಸಾಧನೆ ಆಗ್ತಾ ಇಲ್ಲ . ನನ್ನಿಂದ ಈ ಸಮಾಜಕ್ಕೆ ಉಪಯೋಗ‌ ಆಗ್ತಾ ಇಲ್ಲ .ನನ್ನ ಬದುಕಿಗೊಂದು ಅರ್ಥವೂ ಸಿಕ್ತಾ ಇಲ್ಲ. ಹೀಗೆ ದಿನವೂ ಕೊರಗುವಿಕೆ‌ ಮುಂದುವರೆದಿತ್ತು.

ಕೆಲವು ದಿನಗಳ ನಂತರ ತಾನಿದ್ದಲ್ಲಿಂದ ಮುಂದಡಿ ಇಟ್ಟು ಹೊರಡುವ ಸಮಯವೂ ಬಂತು. ಹಾಗೆ ಹೆಜ್ಜೆ ಇಡುತ್ತ ಮುಂದುವರಿತಾ ಇದ್ದ ಹಾಗೆ ಹನಿಯೂ ಹಳ್ಳವಾಯಿತು ತೊರೆಯಾಯಿತು ನದಿಯಾಯಿತು. ಕೆಲವೊಂದು ಕಡೆ ಏರು ತಗ್ಗುಗಳು ತಿರುಗುಗಳು ಎತ್ತರದ ಜಲಪಾತಗಳು ಅದಾದ ಅಗಾಧ ಶರದಿ ಹೀಗೆ ತನ್ನ ರೂಪವನ್ನು ಬದಲಿಸಿ ಕೊಂಡು ಬದಲಿಸಿ ಕೊಂಡು ಹಲವರಿಗೆ ಸಹಾಯ ಮಾಡುವುದರ ಜೊತೆಗೆ ನನಗೊಂದು ಅದ್ಭುತವಾದ ರೂಪವನ್ನು ಕಟ್ಟಿಕೊಂಡಿತು. ಪ್ರತಿ ಹೆಜ್ಜೆ ಇಟ್ಟಾಗಲು ನಾನೇ ಅದ್ಭುತ ಅಂದುಕೊಂಡ ಹನಿಗೆ ತನ್ನ ರೂಪಗಳು ಬದಲಾಗ್ತಾ ಹೋದ ಹಾಗೆ ತಾನು ಏನು ಸಾಧಿಸಿದ್ದೇನೆ ಸಮುದ್ರದಲ್ಲಿ ನಿಂತು ನನ್ನಿಂದಲೇ ಜಗತ್ತುವನ್ನು ಬದಲಾಯಿಸಿವ ಯೋಚನೆಯು ಮೊಳಕೆ ಹಿಡಿದಿದ್ದು ಆದರೆ ಕೆಲವು ಕ್ಷಣಗಳಲ್ಲಿ ಸೂರ್ಯನ ಬಿಸಿಲಿನ ಪ್ರಖರತೆ ಹೆಚ್ಚಾದ ಕಾರಣ ನೀರ ಮೇಲಿದ್ದ  ಗುಳ್ಳೆಗಳು ಆವಿಯಾಗಿ ಮೋಡವಾಗಿ ತನ್ನೊಳಗೆ ನೀರನ್ನು ಸೇರಿಸಿಕೊಂಡು ಮುಂದೆ ಹನಿಯೋ ಜಾಗಕ್ಕಾಗಿ ಹಾರಾಡ್ತಾ ಇತ್ತು ಗಾಳಿಯ ವೇಗಕ್ಕೆ ಎರಡು ಮೋಡಗಳು ಡಿಕ್ಕಿ ಹೊಡೆದು  ಅವುಗಳಿಂದಾಗಿ ಸಣ್ಣ ಹನಿಯೂ ಮತ್ತೆ ಭೂಮಿಗೆ ಬಂದು ಬಿತ್ತು. ಹೀಗೆ ಹನಿ ತನ್ನಿಡೀ ಪಯಣದಲ್ಲಿ ಜೀವನವನ್ನು ಸಂಪೂರ್ಣವಾಗಿ ತಿಳಿದುಕೊಂಡು ತನಗೆ ಸಿಕ್ಕಿರುವುದನ್ನ ಅದ್ಭುತವಾಗಿ ಬಳಸಿಕೊಂಡು ನೆಮ್ಮದಿಯಿಂದ ಬದುಕೋಕೆ ಆರಂಭ ಮಾಡಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ