ಸ್ಟೇಟಸ್ ಕತೆಗಳು (ಭಾಗ ೧೧೩೫)- ಕಾರಣ
ಅವತ್ತು ಮನೆಗೆ ದೇವರು ಬಂದಿದ್ದರು. ಬಂದ ದೇವರಲ್ಲಿ ನನಗೆ ಬೇಕಾಗಿರುವ ವರ ಕೇಳೋದು ಬಿಟ್ಟು ಒಂದಷ್ಟು ಪ್ರಶ್ನೆಗಳನ್ನ ಅವರ ಮುಂದೆ ಇಟ್ಟೆ. ಭಗವಂತಾ ಬೇರೆ ಬೇರೆ ರೀತಿಯ ಮರಗಳನ್ನು ಹಣ್ಣುಗಳನ್ನು ಹೂಗಳನ್ನು ಭೂಮಿ ಮೇಲೆ ಬೆಳೆಸಿದ್ದೀಯಾ ಇದು ನಿನ್ನ ಕ್ರಿಯಾಶೀಲತೆಗೆ ಒಪ್ಪುವಂತದ್ದು ಆದರೆ ಈ ತೆಂಗಿನ ಮರ, ಅಡಕೆ ಮರ, ಮಾವಿನ ಮರ ಇವೆಲ್ಲವನ್ನ ಎತ್ತರಿಸಿದ್ದೀಯ ಯಾಕೆ? ಕೈಗೆಟುಕುವಲ್ಲಿ ಇಟ್ಟಿದ್ದರೆ ತುಂಬಾ ಉಪಯೋಗ ಆಗ್ತಾ ಇತ್ತು ತಾನೇ? ಬಳ್ಳಿಗಳನ್ನು ಗಿಡಗಳನ್ನು ಹೇಗೋ ಹಾಗೇ ಮರಗಳು ನೀಡಬಹುದಿತ್ತು ಅಲ್ವಾ ?
ನಿನ್ನ ಯೋಚನೆಯನೋ ಸರಿ, ಆದರೆ ಪ್ರತಿಯೊಂದು ಗಿಡ ಮರ ಬಳ್ಳಿಯ ಹಿಂದೆಯೂ ಅದರ ಮೌಲ್ಯ ಇದೆ. ಕೈಗೆಟುಕುವ ಹಾಗೆ ಇಟ್ಟು ಬಿಟ್ರೆ ನಿನ್ನ ಬಳಕೆ ಮಿತಿಮೀರಿ ಹೋಗ್ತಾ ಇತ್ತು ಅದು ಹೆಚ್ಚು ಸಮಯ ಬಾಳ್ವಿಕೆ ಬರಬೇಕು ಈ ಕಾರಣಕ್ಕೆ ಅದನ್ನು ನಂಬಿಕೊಂಡು ಒಂದಷ್ಟು ಜನರ ಜೀವನ ಸಾಗಬೇಕು ಅನ್ನುವ ಕಾರಣಕ್ಕೆ ಪ್ರತಿಯೊಂದು ಎತ್ತರ ತಗ್ಗುಗಳು ನಿರ್ಧಾರವಾಗಿದೆ. ಅರ್ಥ ಮಾಡ್ಕೋ ನೀನೂ ಕೂಡಾ ಎಲ್ಲಿ ಏರಬೇಕು,? ಎಲ್ಲಿ ಕೈಗೆಟಕಬೇಕು, ಹಣ್ಣು ನೀಡಬೇಕು, ಹೂವು ಕೊಡಬೇಕು ಅನ್ನೋದ್ದನ್ನ ತಿಳಿದುಕೋ. ಅಂತಂದು ಮಾಯವಾಗಿ ಬಿಟ್ಟ. ವರಕ್ಕಿಂತಲೂ ದೊಡ್ಡದಾದ ಪಾಠ ಸಿಕ್ಕಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ