ಸ್ಟೇಟಸ್ ಕತೆಗಳು (ಭಾಗ ೧೧೪೨)- ಕುರುಡನಾದ
ಅಪ್ಪ ದಾರಿ ತೋರಿಸುವಾಗ ಹೇಳಿದ ಬುದ್ಧಿ ಮಾತು ಇಂದಿನವರೆಗೂ ಆತನ ಕಿವಿಯನ್ನು ದಾಟಿ ಹೃದಯವನ್ನು ತಲುಪಲೇ ಇಲ್ಲ. ಅಪ್ಪ ತುಂಬಾ ಗಟ್ಟಿಯಾಗಿ ಮೃದುವಾಗಿ ಅರ್ಥವಾಗುವ ಹಾಗೆ ಹೇಳಿದರು. ನೋಡು ಮಗು ನಿನ್ನ ಮುಂದಿನ ದಾರಿಗೆ ಬೆಳಕು ತೋರಿಸೋದಕ್ಕೆ ತುಂಬಾ ಜನ ನಿಂತಿರುತ್ತಾರೆ ಎಲ್ಲರ ಬೆಳಕನ್ನ ಪಡೆದುಕೊಂಡ ನೀನು ತಲುಪುವುದಕ್ಕೆ ಸಹಾಯ ಮಾಡಿದ ಎಲ್ಲ ಮುಖಗಳ ಪರಿಚಯ ನೆನಪಿಟ್ಟುಕೋ. ಮುಂದೊಂದು ದಿನ ಎದುರಾದಾಗ ನೋಡಿ ನಕ್ಕು ಅವರ ಸಹಾಯವನ್ನು ನೆನಪಿಸಿಕೊಂಡು ಮುಂದುವರಿ, ಕುರುಡನಾಗಬೇಡ.
ಹೆಜ್ಜೆಗಳು ಮುಂದುವರಿದವು. ದೇಹ ಬಲಿಯುತ್ತಾ ಹೋದ ಹಾಗೆ ಕಣ್ಣುಗಳು ಕುರುಡಲಾಗಲಾರಂಭಿಸಿದವು. ಕೈಕಾಲುಗಳಿಗೆ ಶಕ್ತಿ ಬಂದ ಹಾಗೆ ಕೆಲವೊಂದು ಹೆಜ್ಜೆಗಳಿಗೆ ಮೆಟ್ಟಿಲು ಕಟ್ಟಿದವರನ್ನು ತುಳಿದು ಮುಂದೆ ಸಾಗುವುದಕ್ಕೆ ಆರಂಭ ಮಾಡಿದ. ಆತ ಕುರುಡನಾದ. ತನಗಿಂದಿನವರೆಗೂ ಬೆಳಕು ತೋರಿದ ಎಲ್ಲಾ ಚೇತನಗಳ ಮರೆತುಬಿಟ್ಟ. ನನ್ನ ಕೈ ಹಿಡಿದು ನಡೆಸಿದ ಎಲ್ಲರನ್ನ ತುಳಿದು ಮುಂದುವರೆದ. ಭಗವಂತ ನಗುತಿದ್ದಾನೆ. ನಿನ್ನ ದಿನವೂ ದೂರವಿಲ್ಲ ನಿನ್ನನ್ನು ನಾನು ಮರೆತು ಮುಂದುವರಿಯುತ್ತೇನೆ ನಿನ್ನ ಅವಶ್ಯಕತೆಗೆ ಕುರುಡನಾಗುತ್ತೇನೆ.... ಎಚ್ಚರ ಕೇಳಲಿಲ್ಲ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ