ಸ್ಟೇಟಸ್ ಕತೆಗಳು (ಭಾಗ ೧೧೫೨)- ಬದುಕು
ಆಗ ನಾನು ಕೈ ಮುಗಿದು ನಿಲ್ಲುತ್ತಿದ್ದೆ. ಅವರು ನಮ್ಮೂರಿನ ಕಾಯುವ ದೈವವಾಗಿ ಆಶೀರ್ವಾದ ಮಾಡ್ತಾರೆ. ಭಕ್ತಿಯಲ್ಲಿ ನಾವೆಲ್ಲ ಪರವಶರಾಗ್ತೇವೆ. ತುಂಬಾ ಶುದ್ಧಾಚಾರದಿಂದ ದೈವಕ್ಕೆ ವೇಷ ಹಾಕಿ ನರ್ತನ ಸೇವೆ ನೀಡುವುದು ಅವರ ಕುಲದ ಆಚಾರ. ಊರು ಆ ದಿನ ಅವರಿಗೆ ಎದ್ದು ನಿಂತು ಗೌರವ ಸೂಚಿಸುತ್ತೆ. ಅವರನ್ನ ಕಾಣದೆ ಹಲವು ವರ್ಷಗಳೇ ದಾಟಿದ್ದವು. ಇಂದು ಮುಖತಃ ಭೇಟಿಯಾದಾಗ ಆ ದೈವಕಳೆ ಮುಖದಲ್ಲಿತ್ತು. ಎಲ್ಲರಿಗೂ ಒಳಿತನ್ನೇ ಬಯಸುವ ಮನಸ್ಸು ಅದು. ಹಾಗಾಗಿ ಅಂದು ಅವರು ಹೇಳಿದ ಮಾತಿಗೆ ಬೆಲೆ ಇತ್ತು. ಊರಿಗೆ ದೇವರಾದವರನ್ನ ಕಣ್ಣ ಮುಂದೆ ಕಂಡಾಗ ಕೈ ಮುಗಿದು ಮಾತನಾಡಿ ನಾನು ಒಂದಷ್ಟು ಸದಾಚಾರ ಅಳವಡಿಸಿಕೊಂಡೆ. ಮನಸ್ಸು ನಿರ್ಮಲವಾಗಿ ಪರರ ಒಳಿತಿಗೆ ತುಡಿದರೆ, ನಿಷ್ಕಲ್ಮಷ ಭಕ್ತಿ ಇದ್ದರೆ ಊರು ಮೆಚ್ಚುತ್ತದೆ. ಇವತ್ತು ಅರ್ಥವಾಯಿತು. ಬದುಕಿನ ಇನ್ನೊಂದು ಮಗ್ಗಲು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ