ಸ್ಟೇಟಸ್ ಕತೆಗಳು (ಭಾಗ ೧೧೫೪)- ಕಮಲ
ಅಲ್ಲೊಂದು ಕಲ್ಲಿನ ಪಕ್ಕದಲ್ಲಿ ಕಮಲ ಒಂದರಳಿದೆ. ತುಂಬಾ ಜನ ಬಂದು ಅದನ್ನೇ ನೋಡುತ್ತಿದ್ದಾರೆ, ಎಲ್ಲರಿಗೂ ಆಶ್ಚರ್ಯ ಕೆಸರಲ್ಲರಳಿ ನಗಬೇಕಾದ ಕಮಲವಿಂದು ಎರಡು ಕಲ್ಲುಗಳ ಮಧ್ಯದ ಪುಟ್ಟ ಜಾಗದಲ್ಲಿ ಅದು ಹೇಗೆ ನಿಂತುಬಿಟ್ಟಿದೆ? ಇಲ್ಲೇನೋ ತಪ್ಪಿದೆ ಅನ್ನೋದು ಅವರೆಲ್ಲರ ವಾದ. ಕಮಲವೂ ಯಾವತ್ತೂ ಕೆಸರಿನಲ್ಲಿ ಇರಬೇಕು, ಅಲ್ಲಿಯೇ ತಾನಿರಬೇಕು, ಎತ್ತರದ ಬೆಟ್ಟದ ಮೇಲೆ ಕಮಲವರಳಬಾರದು. ಆದರೆ ಕಮಲದ ಯೋಚನೆ ಹಾಗಲ್ಲ ನನ್ನ ಬದುಕಿಗೆಲ್ಲಿ ಜಾಗವಿದೆಯೋ ಅಲ್ಲಿ ಅರಳಿ ನಿಲ್ಲುತ್ತೇನೆ. ಎಲ್ಲಿ ಅರಳಿದರೂ ಅರಳಿ ಬಾಡಿ ಕೊನೆಯಾಗುವುದು ನನ್ನ ಜೀವನ ನಿರ್ಮಿತ ಸತ್ಯ . ಹಾಗಿರುವಾಗ ನಾನಿಲ್ಲೇ ಅರಳಬೇಕು ಹೀಗೆ ಬದುಕಬೇಕು ಅನ್ನೋದನ್ನ ನಿರ್ಧರಿಸುವುದಕ್ಕೆ ನೀವು ಯಾರು? ಹಾಗಾಗಿ ನಿಮ್ಮ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ ಅಂತಂದು ತಾನು ವಿಶಾಲವಾಗಿ ಇನ್ನು ವಿಶಾಲವಾಗಿ ಅರಳುತ್ತಾನೇ ಹೋಯಿತು. ಕೇಳುಗರು ಹೇಳುಗರು ಮಾತನಾಡುತ್ತಾನೆ ಇದ್ದರೂ ಕೂಡ ಕಮಲ ತನ್ನ ಕೆಲಸವನ್ನು ತಾ ಮುಂದುವರಿಸಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ