ಸ್ಟೇಟಸ್ ಕತೆಗಳು (ಭಾಗ ೧೧೫೫)- ಇಂದು ನಾಳೆ
ಅವನ ನಗು ತುಂಬಾ ಜೋರಾಗಿದೆ. ಅಲ್ಲೋ ಮಾರಾಯ ನಿನಗೆ ನಿನ್ನಲ್ಲಿ ಎಷ್ಟು ಸಮಯ ಉಳಿದಿದೆ ಅನ್ನೋದೇ ಗೊತ್ತಿಲ್ಲ... ಉಳಿದವರಿಗೆ ಜೀವನದ ಸಮಯವನ್ನ ಹೇಗೆ ಸಾಗಿಸುವುದು ಪ್ರತಿಯೊಂದು ಕ್ಷಣವನ್ನು ಹೇಗೆ ಅನುಭವಿಸುವುದು ಹೀಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದೀಯ ವಿನಃ, ನಿನ್ನ ಬದುಕಿನ ಸಣ್ಣ ಕ್ಷಣಗಳನ್ನು ಅನುಭವಿಸುವುದನ್ನು ನೀನು ಕಲಿತಿಲ್ಲ . ಇಂದೋ ನಾಳೆಯೋ ನಿನ್ನ ಬದುಕಿನ ಗತಿ ಸ್ಥಿತಿಗಳ ಅರಿವು ನಿನಗಿಲ್ಲ ,ಹಾಗಿರುವಾಗ ಈ ಕ್ಷಣದಲ್ಲಿ ಬದುಕುವುದ ಬಿಟ್ಟು ಅನಗತ್ಯ ಕಾಲ ಹರಣ ಯಾಕೆ? ನಾಳೆಯ ಚಿಂತೆಯಲ್ಲಿ ಇಂದು ಮರುಗುತ್ತಿದೆ. ಈ ಇಂದುಗಳೆಲ್ಲಾ ಊರು ಬಿಟ್ಟಿವೆ. ಇಂದೇ ನಾಳೆಗಳಾಗುತ್ತವೆ. ಹಾಗಾಗಿ ಇಂದನ್ನು ಚೆನ್ನಾಗಿ ಅನುಭವಿಸಿದರೆ ಅದು ನಾಳೆಯೊಂದಿಗೆ ಇನ್ನಷ್ಟು ಹುರುಪಿನಿಂದ ನಿನ್ನ ಬಳಿ ಬರುತ್ತದೆ. ಅರ್ಥವಾಯಿತಾ? ನನಗೆ ಏನೂ ಅರ್ಥವಾಗಲಿಲ್ಲ... ನಿಮಗೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ