ಸ್ಟೇಟಸ್ ಕತೆಗಳು (ಭಾಗ ೧೧೯೫) - ಖಾಲಿ ಪುಟ

ಹಾಗೆ ಉಳಿದಿದೆ ಖಾಲಿ ಪುಟಗಳು. ಅದನ್ನ ತುಂಬಿಸುವವರು ಯಾರಿಲ್ಲ ಇಲ್ಲಿ. ತುಂಬಿಸುವುದಕ್ಕೂ ಯಾರನ್ನು ಕರೆದೂ ಇಲ್ಲ. ಎಲ್ಲರ ಜೀವನದ ಬದುಕಿನ ಪುಸ್ತಕದಲ್ಲಿ ಒಂದಷ್ಟು ಖಾಲಿ ಪುಟಗಳು ಹಾಗೆ ಉಳಿದುಬಿಡುತ್ತವೆ. ಅದು ಹಾಗೆ ಉಳಿದು ಬಿಡಬೇಕು, ಯಾರ ಜೀವನದಲ್ಲೂ ಎಲ್ಲ ಪುಸ್ತಕವನ್ನು ತೆರೆದಿಡುವುದಕ್ಕೆ ಸಾಧ್ಯವಿಲ್ಲ ಬರೆದಿಡುವುದಕ್ಕೆ ಆಗುವುದಿಲ್ಲ. ಅದು ನಮ್ಮ ಪುಸ್ತಕ ಅಲ್ಲವಲ್ಲ. ಇನ್ನ್ಯಾರದೋ ಪುಸ್ತಕವಾದ ಕಾರಣ ಹಾಗೆ ಮುಂದೆ ದಾಟಿ ಬಿಡಬೇಕು ಊಹೆಯಲ್ಲಿಯೂ ಮತ್ಸರ ಅಸೂಯೆಯಲ್ಲಿ ತುಂಬಿಸುವ ಕೆಲಸ ಆಗಬಾರದು. ಹಾಗಾಗಿ ಈ ಖಾಲಿ ಪುಟ ಹಾಗೆ ಉಳಿದು ಬಿಡಲಿ. ನೀನು ಓದುವುದನ್ನು ಮುಂದುವರಿಸು ಅಂತ ಎರಡು ಸಾವಿರದ ಇಪ್ಪತ್ತನಾಲ್ಕರ ಅವನ ಡೈರಿ ನನ್ನನ್ನ ನೋಡಿ ಹೇಳ್ತಾ ಇತ್ತು. ಓದು ಮುಂದುವರೆಸಿದೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ