ಸ್ಟೇಟಸ್ ಕತೆಗಳು (ಭಾಗ ೧೨೧೦) - ದ್ವಾರ

ಸ್ಟೇಟಸ್ ಕತೆಗಳು (ಭಾಗ ೧೨೧೦) - ದ್ವಾರ

ದ್ವಾರವೊಂದು ಯಾವುದೇ ಜಾತಿಯ ಹಂಗಿಲ್ಲದೆ, ಧರ್ಮದ ಭೇದವಿಲ್ಲದೆ ಗಟ್ಟಿಯಾಗಿ ನಿಂತುಬಿಟ್ಟಿದೆ. ಆ ದ್ವಾರವನ್ನ ಕಟ್ಟಿದವರು ದಿನದ ಸಂಬಳಕ್ಕೆ ಕೆಲಸ ಮಾಡುವ ಒಂದಷ್ಟು ಜನ. ಅವರ ಜಾತಿ ಧರ್ಮದ ಪರಿಚಯ ಯಾರಿಗೂ ಇಲ್ಲ . ಊರಿನಲ್ಲಿ ಆಗುವ ಉತ್ಸವಕ್ಕೆ ಆ ದಿನ ಕೇಸರಿಯ ಪತಾಕೆಯನ್ನು ಏರಿಸಲಾಗಿತ್ತು ಧಾರ್ಮಿಕ ಚಿತ್ರಗಳನ್ನ ಅದರಲ್ಲಿ ಚಿತ್ರಿಸಲಾಗಿತ್ತು. ಆ ಕಾರ್ಯಕ್ರಮ ಮುಗಿಸಿ ಅಲ್ಲೇ ಪಕ್ಕದಲ್ಲಿರುವ ಮಸೀದಿಯಲ್ಲಿ ಉರೂಸ್ ನ ಸಂಭ್ರಮ ಜೋರಾಗಿತ್ತು . ಬಣ್ಣಗಳು ಬದಲಾಯಿತು ಉರೂಸ್ ಗೆ ಶುಭ ಕೋರುವ ಸೂಚನೆಗಳು ದ್ವಾರದ ಅಲ್ಲೆಲ್ಲ ಮಿನುಗಲಾರಂಭಿಸಿತು. ದಿನ ಕಳೆದಂತೆ ಶಾಲೆಯ ಉತ್ಸವಕ್ಕೂ ಅಲ್ಲೇ ಸಂಭ್ರಮದ ಸ್ವಾಗತವನ್ನು ಬಯಸಲಾಗಿತ್ತು. ಚರ್ಚಿನಲ್ಲಿ ನಡೆಯುವ ಆರಾಧನಾ ಮಹೋತ್ಸವಕ್ಕೆ ದೇವರ ಅದ್ಭುತ ವಾಕ್ಯಗಳನ್ನ ಅದರಲ್ಲಿ ಚಿತ್ರಿಕರಿಸಲಾಗಿತ್ತು. ಹೀಗೆ ಜಾತಿ ಧರ್ಮ ಯಾವುದೇ ಭೇದವಿಲ್ಲದೆ ದ್ವಾರವೊಂದು ಅದ್ಭುತ ಸಂದೇಶವನ್ನು ನೀಡಕ್ಕೆ ಹೊರಟಿದೆ. ಆದರೆ ಅದನ್ನ ನೋಡುತ್ತಾ ಅದರಲ್ಲಿ ಹಾದು ಹೋಗುವ ಹಲವರಿಗೆ ನಾವು ಒಂದಾಗಿ ಬಾಳಬೇಕು ಅನ್ನುವ ಸೂಚನೆಯ ಸಣ್ಣ ಸುಳಿವು ಸಿಗದೇ ಇರುವುದು ವಿಪರ್ಯಾಸ. ಹಾಗಾಗಿ ದ್ವಾರ ತನ್ನ ಕೆಳಗೆ ಹಾದು ಹೋಗುವವರಿಗೆ ಸಂದೇಶವನ್ನು ದಾಟಿಸುತ್ತಾನೆ ಇದೆ. ಅರ್ಥ ಮಾಡಿಕೊಂಡವರು ಮಾಡಿಕೊಂಡರೆ ಸಮಾಜದಲ್ಲೊಂದಿಷ್ಟು ಬದಲಾವಣೆ ಕಾಣಬಹುದು ಎನ್ನುವ ಆಸೆಯಿಂದ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ