ಸ್ಟೇಟಸ್ ಕತೆಗಳು (ಭಾಗ ೧೨೧೧) - ಅರ್ಥ
ನಿನಗ ಅರ್ಥವಾಗುವುದು ಯಾವಾಗ? ತಯಾರಾಗದ ನೆಲದ ಮೇಲೆ ಎಂತಹದೇ ಅದ್ಭುತ ಬೀಜ ಬಿದ್ದರೂ ಅದರಿಂದ ಫಲ ಸಿಗೋದಿಲ್ಲ. ಮೊದಲು ನೆಲವನ್ನ ತಯಾರು ಮಾಡುವ ಕೆಲಸಕ್ಕೆ ಕೈ ಹಾಕು, ಆ ನಂತರ ಬೀಜಗಳನ್ನ ಆಯ್ದುಕೊಂಡು ಯಾವ ನೆಲಕ್ಕೆ ಯಾವ ಬೀಜ ಸೂಕ್ತ ಅನ್ನೋದನ್ನ ತಿಳಿದುಕೊಂಡು ಮುಂದುವರೆದರೆ ಅದ್ಭುತವಾದ ಫಸಲು ನಿನ್ನದಾಗುತ್ತೆ. ಗಿಡದ ಬುಡ ಯಾವುದು ಅಂತ ತಿಳಿದುಕೊಂಡು ನೀರು ನೀಡಬೇಕು, ಎಲ್ಲೋ ಒಂದು ಕಡೆ ನೀರು ಸುರಿದರೆ ಬೇರು ಹೋಗಿ ಅದನ್ನು ಪಡೆದುಕೊಳ್ಳುವ ಸಾಮರ್ಥ್ಯವು ಇರುವುದಿಲ್ಲ. ನೀರೆಲ್ಲಿಗೆ ನೀಡಬೇಕು, ಗೊಬ್ಬರವೆಲ್ಲಿಗೆ ಹಾಕಬೇಕು ಅನ್ನೊದ್ದನ್ನ ತಿಳಿದುಕೊಂಡಾಗ ಗಿಡ ಬೆಳೆಸುವ ಸಾಮರ್ಥ್ಯವು ಸಿಗುತ್ತೆ, ಬೆಳೆಯುವ ಗಿಡಕ್ಕೆ ಪೌಷ್ಟಿಕಾಂಶವು ಸಿಗುತ್ತೆ. ಇದನ್ನ ಬದುಕಿಗೊಂದಿಷ್ಟು ಅರ್ಥೈಸಿಕೊಂಡು ನೋಡು ನಿನ್ನಲ್ಲೊಂದು ಚೂರು ಬದಲಾವಣೆಯಾದರೂ ಕಾಣಬಹುದು. ಇಲ್ಲವಾದರೆ ನದಿಯೇ ಇಲ್ಲದ ಊರಿಗೆ ಸೇತುವೆ ಕಟ್ಟಿದ ಪರಿಸ್ಥಿತಿ ನಿನ್ನದಾಗುತ್ತೆ ಎಚ್ಚರ ಇರಲಿ ಅವನ ಒಗಟಿನ ಮಾತನ್ನ ಅರ್ಥೈಸಿಕೊಂಡವರ ಬಾಳು ಬೆಳುಗುತ್ತಾನೆ ಹೋಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ