ಸ್ಟೇಟಸ್ ಕತೆಗಳು (ಭಾಗ ೧೨೨೨) - ಮೂರ್ತಿ

ನೀನ್ಯಾಕೆ ಇನ್ನು ಇನ್ನು ಅಲ್ಲೇ ಉಳಿದಿದ್ದೀಯ.? ನಾನು ನಿನ್ನನ್ನ ಈ ಸ್ಥಳದಲ್ಲಿ ನೋಡೋದಕ್ಕೆ ಬಯಸಿದವನಲ್ಲ, ನಿನ್ನೊಳಗಿನ ಸಾಮರ್ಥ್ಯಕ್ಕೆ ನೀನು ಆ ಗರ್ಭಗುಡಿಯ ಒಳಗೆ ಮೂರ್ತಿ ಆಗಿರಬೇಕಿತ್ತು. ಬಂದವರು ನಿನಗೆ ಗೌರವ ಕೊಡಬೇಕಿತ್ತು. ಆದರೆ ನಿನಗೆ ಮೂರ್ತಿಯಾಗುವ ಭಯ, ಹಾಗಾಗಿ ಕಲ್ಲಾಗಿ ಉಳಿದುಬಿಟ್ಟಿದಿಯ. ನೀನು ಮೂರ್ತಿ ಆಗುವುದಕ್ಕೆ ಒಂದಷ್ಟು ಪರಿಶ್ರಮ ಪಡಬೇಕು, ಇಲ್ಲವಾದರೆ ಎಲ್ಲೋ ಒಂದು ಮೂಲೆಯಲ್ಲಿ ಉಳಿದುಬಿಡುತ್ತೀಯಾ ಯಾರಿಗೂ ಯಾವುದಕ್ಕೂ ಉಪಯೋಗವಿಲ್ಲದೆ ವ್ಯರ್ಥ ಜೀವನ ನಿನ್ನದಾಗುತ್ತೆ. ಕಲ್ಲಿನಿಂದ ಮೂರ್ತಿಯ ಕಡೆಗೆ ಸಾಗಬೇಕಾದ ದಾರಿಯನ್ನ ಸವೆಸಲೇಬೇಕು ಇಲ್ಲವಾದರೆ ನಿನ್ನ ಬದುಕಿಗೂ ಅರ್ಥವಿರಲಿಲ್ಲ .ಹಾಗಾಗಿ ಕಲ್ಲಿನಿಂದ ಮೂರ್ತಿಯಾಗು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ