ಸ್ಟೇಟಸ್ ಕತೆಗಳು (ಭಾಗ ೧೨೨೬) - ಮಾರಾಟ

ಆಸೆಗಳು ಮಾರಾಟವಾಗಲೇಬೇಕು. ಕಣ್ಣು ಬಯಸುತ್ತಿದೆ. ಹೊಸ ಹೊಸ ವಸ್ತುಗಳನ್ನ, ಸಿಹಿಗಳನ್ನ, ವಿಷಯಗಳನ್ನ, ಆದರೆ ಕಿಸೆಯೊಳಗೆ ಕೈ ಹಾಕಿದಾಗ ಕೈಗೆ ಮೌನವೊಂದೇ ಉತ್ತರ ಸಿಗುತ್ತಿದೆ. ಇಲ್ಲಿ ಆಸೆಗಳನ್ನ ಮಾರಾಟ ಮಾಡಿ ಮುಂದೆ ಹೆಜ್ಜೆ ಇಡ್ಲೇಬೇಕು. ಇಲ್ಲವಾದರೆ ನೋವೊಂದೇ ಬದುಕಿನ ದಾರಿಯಾಗುತ್ತದೆ. ಜಾತ್ರೆಯಲ್ಲಿ ಎಲ್ರೂ ಮಾರಾಟಕ್ಕೆಂದೇ ಬಂದವರು. ಕೆಲವರಿಗೆ ತಮ್ಮ ಕಷ್ಟಗಳು ಮಾರಾಟವಾಗಬೇಕು, ಕೆಲವರಿಗೆ ವಸ್ತುಗಳು ಕೆಲವರಿಗೆ ಕನಸು, ಬದುಕು, ಎಲ್ಲವೂ ಮಾರಾಟವಾಗಬೇಕು. ಕೆಲವರ ಕಣ್ಣಲ್ಲಿ ಆಸೆ ಇಲ್ಲದಿದ್ದರೂ ಕಿಸೆ ಮಾತನಾಡುವ ಕಾರಣ ಕೈಗೆ ಸಿಕ್ಕಿದ್ದನ್ನೆಲ್ಲಾ ಪಡೆಯುತ್ತಿದ್ದಾರೆ. ಕೆಲವರಿಗೆ ಕಣ್ಣಲ್ಲಿ ಆಸೆ ಇದೆ ಪರಿಸ್ಥಿತಿ ಒಪ್ಪಿಕೊಳ್ಳದ ಕಾರಣ ಸಿಕ್ಕಿದನ್ನೇ ಇಷ್ಟ ಪಡುತ್ತಿದ್ದಾರೆ. ಒಟ್ಟು ಬದುಕು ಮಾರಾಟಕ್ಕೆ ನಿಂತಿದೆ .ಅವರವರಿಗೆ ಬೇಕಾದನ್ನು ಪಡೆದುಕೊಳ್ಳುತ್ತಾ ಸಿಗದೇ ಇದ್ದದನ್ನ ಬೇಡವೆಂದು ಬಿಡುತ್ತಾ ಒಟ್ಟಿನಲ್ಲಿ ಬದುಕು ಈ ಜಾತ್ರೆಯಲ್ಲಿ ಮಾರಾಟಕ್ಕೆ ನಿಂತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ