ಸ್ಟೇಟಸ್ ಕತೆಗಳು (ಭಾಗ ೧೨೪) - ಸಂತೆ

ಸ್ಟೇಟಸ್ ಕತೆಗಳು (ಭಾಗ ೧೨೪) - ಸಂತೆ

ಇಲ್ಲೊಂದು ಸಂತೆ ಇದೆ. ಆದರೆ ಇದು ವಾರ, ದಿನಗಳಿಗೆ ಸೀಮಿತವಾದದ್ದಲ್ಲ. ಕ್ಷಣ ಕ್ಷಣದ ಸಂತೆ. ನೆರಳು ಬಿಸಿಲಿನ ಭೇದಭಾವವಿಲ್ಲದೆ ಮಾರಾಟವಾಗುತ್ತಿದೆ ವಸ್ತುಗಳು. ಇಲ್ಲಿ ಖರೀದಿಸುವರು ಮಾತ್ರ ಇದ್ದಾರೆ, ಮಾರಾಟಗಾರನಿಲ್ಲ. ನಾವು ಖರೀದಿಸುವ ವಸ್ತುಗಳ ಬೆಲೆ ನಮ್ಮ ಅಭ್ಯಾಸ, ಗುಣ, ನಡತೆಗಳನ್ನು ಅವಲಂಬಿಸಿರುತ್ತದೆ. ಕೆಲವರಿಗೆ ಉಚಿತ, ಹಲವರಿಗೆ ಕೋಟಿ ಲಕ್ಷಗಳ ಲೆಕ್ಕದಲ್ಲಿ ಸಂತೆಯ ವಸ್ತುಗಳು ದೊರಕುತ್ತದೆ. ಈ ಸಂತೆಯಲ್ಲಿ ಪ್ರತಿಯೊಬ್ಬರೂ ಹಾದು ಹೋಗಲೇಬೇಕು . ಇಲ್ಲಿ ಇಪ್ಪತ್ತು ಇಪ್ಪತ್ತು,? ಕೆಜಿಗೆ ಇಷ್ಟು ? ಎಂದು ಕೂಗೋವುದಿಲ್ಲ. ನಾವೇ ಅರಿವಿರದ ಅರಿವಿನಿಂದ ಸಂತೆಯ ಅಂತರಂಗದೊಳಗೆ ಪಯಣಿಸುತ್ತಲೇ ಇರಬೇಕು. ಜನ ಹೆಚ್ಚು ಕಾಣೋದೇ ಆ ಅಂಗಡಿಯ ಮುಂದೆ ಅಲ್ಲೊಂದು ಫಲಕ ತೂಗಿಬಿಟ್ಟಿದೆ. "ಹುಟ್ಟು ಸಾವುಗಳು ಮಾರಾಟಕ್ಕಿದೆ" ಬೇಡವೆಂದು ಖರೀದಿಸದೆ ತಪ್ಪಿಸಿಕೊಳ್ಳುವ ಹಾಗಿಲ್ಲ. ಸಂತೆಯೊಳಗೆ ಕಾಲಿರಿಸುವ ಮುನ್ನ ಯೋಚಿಸಿ ಮನಸ್ಸು ದೇಹ ಪೂರ್ತಿ ತಯಾರಾಗದೆ ಖರೀದಿಸಬೇಡಿ. ಬೇಡವೆಂದಾಗ ಖರೀದಿಸಿದ  ವಸ್ತುವನ್ನು ತಿರುಗಿಸುವ ಅವಕಾಶವೂ ಇಲ್ಲವಲ್ಲ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ