ಸ್ಟೇಟಸ್ ಕತೆಗಳು (ಭಾಗ ೧೨೫೬) - ಅರ್ಥ

ಸ್ಟೇಟಸ್ ಕತೆಗಳು (ಭಾಗ ೧೨೫೬) - ಅರ್ಥ

ಅಪ್ಪ ಆಗಾಗ ಒಂದು  ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್ತದೆ. ಎಲ್ಲ ಪ್ರಶ್ನೆಗಳಿಗೆ ಅವತ್ತು ಉತ್ತರ ಸಿಗುತ್ತದೆ ಹೀಗೆ ಅಪ್ಪ ಹೇಳಿದ ಎಲ್ಲ ಮಾತುಗಳನ್ನು ಗಟ್ಟಿಯಾಗಿ ನೆಚ್ಚಿಕೊಂಡು ಹೆಜ್ಜೆಗಳನ್ನು ಇಟ್ಟವ ರಮೇಶ. ಆದರೆ ಸಮಯ ದಾಟಿತೆ ವಿನಃ ಅಪ್ಪ ಹೇಳಿದ ಒಳ್ಳೆಯ ದಿನ ಒಂದು ದಿನವೂ ಆತನಿಗೆ ಎದುರಾಗಲೇ ಇಲ್ಲ. ಆತ ನಿಂತು ಕಾಯುತ್ತಿದ್ದ ಅಪ್ಪನ ಕೊನೆಗಾಲ ಸಮಯ ಸಮೀಪಿಸುತ್ತಿತ್ತು ಮಾತು ತಪ್ಪಿದ ಅಪ್ಪನ ಮೇಲೆ ರಮೇಶನಿಗೆ ಸಿಟ್ಟು ಹೆಚ್ಚಾಗ್ತಾ ಇತ್ತು, ಮರಣ ಶೈಲಿಯಲ್ಲಿ ಮಲಗಿದ ಅಪ್ಪನ ಬಳಿ ಕುಳಿತ ರಮೇಶ "ಅಪ್ಪ ನೀನು ಅವತ್ತಿನಿಂದ ಹೇಳ್ತಾ ಇದ್ದೀಯ ಒಳ್ಳೆಯ ದಿನ ಬರುತ್ತೆ ಬರುತ್ತೆ ಅಂತ ಆದರೆ ಇಂದಿನವರೆಗೂ ನನಗಂತೂ ದಿನ ಎದುರಾಗಲೇ ಇಲ್ಲ .ಯಾಕಪ್ಪಾ ಹೀಗೆ ಮಾಡಿದೆ" ಅಪ್ಪನ ಉತ್ತರ ಹೇಗಿತ್ತು "ಮಗ ಕಾಲ ಎದುರಾಗುತ್ತೆ ಅಂತ ನೀನೊಂದು ಕಡೆ ಕಾದು ಕುಳಿತರೆ ನಿನ್ನ ಜೀವನದಲ್ಲಿ ಏನೂ ಬದಲಾವಣೆಗಳಾಗುವುದಿಲ್ಲ. ನೀನು ಪ್ರಯತ್ನ ಪಡಬೇಕು ಹೊಸ ದಾರಿಯ ಕಡೆಗೆ ನುಗ್ಗಬೇಕು  ನೀನು ಸಾಗಿದ ಹಲವು ದಾರಿಗಳಲ್ಲಿ ಯಾವುದೋ ಒಂದು ದಾರಿ ನಿನ್ನದಾಗುತ್ತೆ. ನಿನ್ನ ಜೀವನ ಅಲ್ಲಿಂದ ಬದಲಾಗುತ್ತೆ .ನೀನು ಕುಳಿತಲ್ಲಿಗೆ ಅವಕಾಶಗಳನ್ನು ತಂದು ಕೊಡುವುದಕ್ಕೆ ಜಗತ್ತೇನು ನಿನ್ನ ಮನೆಯ ಸ್ವತ್ತಲ್ಲ. ನಿನಗೆ ಬೇಕಾದರೆ ನೀನೆ ಪಡೆದುಕೊಳ್ಳಲೇಬೇಕು.  ನೀನು ನನ್ನ ಮಾತನ್ನ ಅರ್ಥಮಾಡಿಕೊಳ್ಳದೆ ಇಷ್ಟು ಸಮಯ ವ್ಯರ್ಥ ಮಾಡಿದ್ದನ್ನ ನೋಡಿ ಸಾವು ಇನ್ನಷ್ಟು ಬೇಗ ಬರಬಾರದೆ ಎಂದೆನಿಸುತ್ತಿದೆ." ಅಪ್ಪ ಮೌನವಾದರೂ ಮಗ ಸಮಯ ವ್ಯರ್ಥ ಮಾಡಿದ್ದಕ್ಕೆ ಕಣ್ಣೀರುಳಿಸುತ್ತಾ ನಿಂತು ಬಿಟ್ಟ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ