ಸ್ಟೇಟಸ್ ಕತೆಗಳು (ಭಾಗ ೧೨೮೧) - ಪ್ರಯತ್ನ

ಸ್ಪರ್ಧೆಗೆ ತಯಾರಿಯಾಗಿತ್ತು. ಗೆಲುವು ಸಿಗುವ ನಂಬಿಕೆ ಇತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನವನ್ನು ಮುಗಿಸಿದ ಕೂಡಲೇ ತಾವು ಮಾಡಿರುವ ಹಲವು ತಪ್ಪುಗಳ ಅರ್ಥವಾಯಿತು. ಉಳಿದ ತಂಡಗಳ ಪ್ರದರ್ಶನಗಳನ್ನ ಕಂಡವರಿಗೆ ಗೆಲುವು ನಮ್ಮದಲ್ಲ ಅಂತ ಅನಿಸ್ತು. ಹಾಗಾಗಿ ಗೆಲುವಿನ ಆಸೆಯನ್ನೇ ಬಿಟ್ಟು ಸುಮ್ಮನೆ ಇದ್ದುಬಿಟ್ಟಿದ್ದರು. ಬಹುಮಾನದ ಪಟ್ಟಿ ಓದುವಾಗ ಮೊದಲ ಬಹುಮಾನದ ಹೆಸರಿನಲ್ಲಿ ಇವರ ತಂಡ ಇದ್ದದ್ದು ನೋಡಿ ಆಶ್ಚರ್ಯ ಆಯ್ತು, ಸಂಭ್ರಮ ಹೆಚ್ಚಾಯಿತು. ಪ್ರಶಸ್ತಿ ಕೈಯಲ್ಲಿ ನಗುತ್ತಾ ಇತ್ತು. ಅವರ ಮನಸೊಳಗೆ ಕಾಡ್ತಾ ಇದ್ದದ್ದು ಒಂದೇ ಪ್ರಶಸ್ತಿ ನಮ್ಮನ್ನೇ ಹುಡುಕಿ ಬಂದದ್ದು ಯಾಕೆ? ಹಾಗಾದರೆ ಸತತ ಪರಿಶ್ರಮವಿದ್ದಾಗ ವೇದಿಕೆಯಲ್ಲಿ ಮಾಡುವ ಸಣ್ಣ ತಪ್ಪುಗಳು ಗಣನೀಯ ಅನ್ನಿಸಿಕೊಳ್ಳುವುದಿಲ್ಲ. ನಿರಂತರ ಪ್ರಯತ್ನವಿದ್ದು ಮನಸ್ಪೂರ್ತಿಯಾಗಿ ಒಂದು ಕೆಲಸಕ್ಕೆ ಕೈ ಹಾಕಿದಾಗ ಗೆಲುವು ಖಂಡಿತವಾಗಿಯೂ ದೊರಕುತ್ತದೆ ಅನ್ನೋದು ಅವರಿಗೆ ಅರ್ಥ ಆಯ್ತು. ಹಾಗಾಗಿ ಪ್ರಯತ್ನವನ್ನೇ ಹೆಚ್ಚು ನಂಬಿಕೊಂಡು ಮುಂದಿನ ಕೆಲಸಕ್ಕೆ ಹೆಜ್ಜೆ ಇಟ್ಟರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ