ಸ್ಟೇಟಸ್ ಕತೆಗಳು (ಭಾಗ ೧೨೮೨) - ನಿನ್ನ ಪೆನ್ನು

ನಿನಗರ್ಥವಾಗಬೇಕು ಮೊದಲು. ಅವರ ಬಳಿ ಬರೆಯುವ ಪುಸ್ತಕ ತುಂಬಾ ದೊಡ್ಡದಿರಬಹುದು. ಆದರೆ ಅದನ್ನು ಬರೆದು ತುಂಬಿಸೋಕೆ ನಿನ್ನ ಬಳಿ ಇರುವ ಪೆನ್ನು ಕೇಳಿದ ಕಾರಣ ನೀನು ನೀಡಿದ್ದೀಯಾ, ಅವರ ಬರವಣಿಗೆಯಲ್ಲಿ ಪುಟಗಳು ತುಂಬುತ್ತಿವೆ. ಕೆಲವು ದಿನ ಕಳೆದ ಮೇಲೆ ಅವರು ಪೆನ್ನು ಬದಲಿಸುತ್ತಾರೆ. ಹೊಸ ಬರವಣಿಗೆ ಅವರು ಆರಂಬಿಸುತ್ತಾರೆ. ಅವರ ಪುಸ್ತಕ ತುಂಬಿದರೆ ಸಾಕು. ನಿನ್ನ ಪೆನ್ನಿನ ಅವಶ್ಯಕತೆ ಅವರಿಗಿಲ್ಲ. ನೀನು ಅದಕ್ಕೆ ಬೇಸರಿಸಿದರೆ ಹೇಗೆ? ಅವರ ಬರವಣಿಗೆಯ ಮೌಲ್ಯ ಹೆಚ್ಚಾಗಲು ನಿನ್ನ ಪೆನ್ನಿಂದ ಮಾತ್ರ ಸಾದ್ಯ ಅನ್ನುವಂತಹ ದಿನ ಬಂದಾಗ ನಿನಗೂ ಒಂದಷ್ಟು ಗೌರವ ಸಿಗುತ್ತದೆ. ಹಾಗಾಗಿ ಸರಿಯಾಗಿ ಯೋಚಿಸು ನಿನ್ನ ಪೆನ್ನು ಯಾರ ಪುಸ್ತಕದ ಪುಟಗಳನ್ನ ತುಂಬಿಸುವುದ್ದಕ್ಕೆ ಬಳಕೆಯಾಗುತ್ತಿದೆ ಎಂದು. ನಿನ್ನ ಪೆನ್ನಿನ ಶಾಯಿ ಅದರ ಮೌಲ್ಯ ನಿನಗೆ ಗೊತ್ತಿದೆ,ಯೋಚಿಸಿ ಅಕ್ಷರಗಳನ್ನ ಮುದ್ರಿಸು ನೆನಪಿಟ್ಟುಕೋ ನಿನ್ನ ಪೆನ್ನಿನ ಶಾಯಿಯ ಮೌಲ್ಯ ನಿನಗೆ ತಿಳಿದಿದೆ ತಾನೆ...ಅಪ್ಪನ ಮಾತು ಖಾರವಗಿತ್ತು. ಯಾಕೆ ಅನ್ನುವ ಯೋಚನೆಯಲ್ಲಿಯೇ ದಿನ ಓಡುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ