ಸ್ಟೇಟಸ್ ಕತೆಗಳು (ಭಾಗ ೧೨೮೩) - ನಾಲಗೆಯಾಡುವ ಮಾತು

ನಾಲಗೆ ಬಣ್ಣ ಹಚ್ಚಿಕೊಳ್ಳುತ್ತಿದೆ, ನಿನ್ನನ್ನ ಮುಗಿಸುವುದ್ದಕ್ಕೆ ಕಾಯುತ್ತಿದೆ. ನಾಲಗೆಗೆ ಒಮ್ಮೆ ರುಚಿ ಹಚ್ವಿಕೊಂಡರೆ ಸಾಕು ಅದು ಸುತ್ತ ಮುತ್ತ ಗಮನಿಸುವುದಿಲ್ಲ. ಕೆಟ್ದದ್ದು ರುಚಿಸುತ್ತದೆ. ಮತ್ತೆ ಮತ್ತೆ ಅದೇ ಮಾತನ್ನ ಹುಡುಕಿ ಮಾತನಾಡಲು ಆರಂಬಿಸುತ್ತೆ.ನೀನು ಎಚ್ಚರವಿರಬೇಕು, ಸುತ್ತ ಸೇರಿದ ನಾಲಗೆಗಳು ಆಡುತ್ತಿರುವ ಮಾತಿನ ಅರ್ಥವೇನು? ಕ್ಷಣದ ನಗುವಿಗೆ ಸುತ್ತ ನಿಂತ ಮನಸ್ಸುಗಳ ಮೇಲಾಗುವ ಪರಿಣಾಮವೇನು? ಮಣ್ಣಿನ ಮುದ್ದೆಯೊಂದು ರೂಪ ಪಡೆದುಕೊಳ್ಳುತ್ತಿರುವಾಗ ಸುತ್ತ ನಿಂತವರು ಅದರೊಳಗೆ ಕಲ್ಮಷಗಳನ್ನ ತುಂಬಿದರೆ ಮಣ್ಣಿನ ಮುದ್ದೆಯ ರೂಪ ವಿಕಾರಗೊಳ್ಳುತ್ತದೆ. ಅದರ ವಿಕಾರಕ್ಕೆ ಕಾರಣ ಸುತ್ತ ನಿಂತ ನಾಲಗೆಗಳಾಗುತ್ತವೆ. ನಿನ್ನ ನಾಲಗೆಯಿಂದ ಹೊರಡುವ ಪ್ರತೀ ಪದಗಳಿಗೂ ದೂರದಲ್ಲಿ ನಿಂತ ಇನ್ನೊಂದಷ್ಟು ನಾಲಗೆಗಳು ಅರ್ಥ ಕಟ್ಟಿಕೊಳ್ಳುತ್ತವೆ. ಆ ಕ್ಷಣಕ್ಕೆ ವಿಷವು ಸಿಹಿಯೆನಿಸಬಹುದು, ಆದರೆ ಕೊಲ್ಲದೆ ಬಿಡುವುದಿಲ್ಲ. ಮಾತು ಹಿಡಿತದಲ್ಲಿರಲಿ, ಅರ್ಥದಲ್ಲಿರಲಿ, ಬದುಕು ಬೆಳಗುವ ಹಾಗಿರಲಿ, ನೆನಪಿಟ್ಟುಕೋ ನಾಲಗೆಯ ತಪ್ಪಿಗೆ ಪ್ರಾಯಶ್ಚಿತ ಘೋರವಾಗಿರುತ್ತದೆ.... ಎಚ್ಚರಿಕೆ ನೀಡಿದ ವೇದವ್ಯಾಸರ ಮಾತಿನಲ್ಲಿ ಖಾರವಿತ್ತು, ಕಣ್ಣಲ್ಲಿ ನೀರಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ