ಸ್ಟೇಟಸ್ ಕತೆಗಳು (ಭಾಗ ೧೨೮೫) - ಯಾವುದಾಯ್ಕೆ?

ಸ್ಟೇಟಸ್ ಕತೆಗಳು (ಭಾಗ ೧೨೮೫) - ಯಾವುದಾಯ್ಕೆ?

ಆಗಾಗ ಜೀವನ ಪಾಠವನ್ನ ಯಾರಾದರೂ ಮಾಡುತ್ತಾನೇ ಇರಬೇಕು ಇಲ್ಲದಿದ್ದರೆ ನನ್ನ ತಲೆಗಂತೂ ಏನೂ ಹೋಗೋದಿಲ್ಲ . ಒಂದು ಸಲ ಕೇಳಿದ್ದನ್ನ ಜೀವನಪೂರ್ತಿ ನೆನಪಿಟ್ಟುಕೊಳ್ಳುವಷ್ಟು ಶಕ್ತಿಯೂ ನನ್ನಲ್ಲಿಲ್ಲ. ಇದು ಗೊತ್ತಿದ್ದ ನನ್ನ ಮೇಷ್ಟ್ರು ಆಗಾಗ ನನಗೆ ಕಣ್ಣ ಮುಂದೆ ಕಾಣೋ ಘಟನೆಗಳನ್ನ ತೋರಿಸಿ ಬದುಕಿನ ಪಾಠ ಹೇಳುತ್ತಿದ್ದರು. ಅವತ್ತು ಮೂರು ಜನ ಬಿಲ್ಲುಗಾರರ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ಮೂರು ಜನರೂ ಬಾಣ ಬಿಡುವರೇ. ಮೊದಲನೇ ಅವನು ಬಾಣಗಳನ್ನ ಬಿಡುವುದಕ್ಕೆ ಆರಂಭ ಮಾಡಿದ. ಕೆಲವು ಪ್ರಯತ್ನದ ನಂತರ ಯಾವುದೂ ಗುರಿ ತಲುಪದ ಕಾರಣ ಅದನ್ನ ಬಿಟ್ಟು ಸುಮ್ಮನಾಗಿಬಿಟ್ಟ. ಅವನ ಪಕ್ಕ ನಿಂತವ  ಬಾಣವನ್ನ ಬಿಡಬೇಕು ಯಾವ ದಿಕ್ಕಿನಲ್ಲಿ ಬಿಟ್ರೆ ಯಾವ ಕಡೆಗೆ ಹೋಗುತ್ತದೆ, ಗಾಳಿ ಯಾವ ಕಡೆಯಿಂದ ಬೀಸ್ತಾ ಇದೆ ನಾನೀಗ ಬಾಣವನ್ನ ಬಿಟ್ಟರೆ ನನ್ನ ಶಕ್ತಿ ಹೆಚ್ಚಾಗುತ್ತೋ ಕಡಿಮೆಯಾಗುತ್ತೋ ? ಗುರಿಯನ್ನು ತಲುಪುತ್ತೋ ಇಲ್ವೋ ಹೀಗೆ ಯೋಚನೆ ಮಾಡುತ್ತಾನೆ ಸಮಯವನ್ನು ಕಳೆದು ಬಿಟ್ಟಿದ್ದ. ಕೊನೆಯವನು ಸತತ ಪ್ರಯತ್ನದ ನಂತರ ಗುರಿಯನ್ನು ತಲುಪಿದ ಮತ್ತೆ ಇನ್ನೊಂದಷ್ಟು ಹೆಚ್ಚು ಪ್ರಯತ್ನ ಪಡ್ತಾ ಹೋದ ಹಾಗೆ ಆತನ ಎಲ್ಲ ಬಾಣಗಳು ಗುರಿಯನ್ನು ತಲುಪಿಬಿಟ್ಟವು. ಇದನ್ನ ತೋರಿಸಿ ಗುರುಗಳು ಕಾಲಹರಣ ಮಾಡಬೇಡ ಕೆಲಸಕ್ಕಿಳಿದು ಬಿಡು, ಒಳಿತಾಗುತ್ತೋ ಕೆಡುಕಾಗುತ್ತೋ ಆದ ಮೇಲೆ ತಿಳಿಯುತ್ತದೆ. ಗುರುಗಳು ಹೇಳಿದ್ದಕ್ಕೆ ಕೆಲಸ ಪ್ರಾರಂಭ ಮಾಡಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ