ಸ್ಟೇಟಸ್ ಕತೆಗಳು (ಭಾಗ ೧೨೮೬) - ಸಮಯ

ಸ್ಟೇಟಸ್ ಕತೆಗಳು (ಭಾಗ ೧೨೮೬) - ಸಮಯ

ಕೈಯಲ್ಲಿ ಹಿಡಿದ ಕಾಫಿ ತಣ್ಣಗಾಗಿ ಬಿಟ್ಟಿದೆ. ನೀನು ಮೊದಲೇ ಯೋಚನೆ ಮಾಡಬೇಕಿತ್ತು, ಕಾಫಿಯನ್ನ ಬಿಸಿ ಬಿಸಿ ಇರುವಾಗಲೇ ಕುಡಿಯಬೇಕಿತ್ತು, ಕಾಫಿಯನ್ನ ಕೈಯಲ್ಲಿ ಹಿಡಿದು ಯಾರೋ ಬರುತ್ತಾರೆ ಯಾರು ಅನುಮತಿ ನೀಡುತ್ತಾರೆ ಅಂತ ಕಾದು ಕಾದು ಕುಳಿತು ಈಗ ತಣ್ಣಗಿರೋ ಕಾಫಿಯನ್ನು ಕುಡಿಯುವುದಕ್ಕೆ ಪ್ರಾರಂಭ ಮಾಡಿದರೆ ಅದರ ಸ್ವಾದ ನಿನಗೆ ತಿಳಿಯುವುದಿಲ್ಲ. ನಿಜವಾದ ಸ್ವಾದವನ್ನು ಪಡೆಯುವುದಕ್ಕೆ ಸಾಧ್ಯ ಆಗುವುದಿಲ್ಲ. ಹಾಗಾಗಿ ಕಾಯಬೇಡ.ಸುಮ್ಮನೆ ನಿಂತು ಯೋಚಿಸಬೇಡ .ಓಡುತ್ತಿದೆ ಸಮಯ ಆ ಸಮಯದ ರಾಜ ಯಾರಿಗೂ ಕಾಯುವುದಿಲ್ಲ. ಆತನಿಗೆ ವ್ಯವಧಾನ ಇಲ್ಲ ಅವನ ಜೊತೆಗೆ ಹೊಂದಿಕೊಂಡು ಬದುಕಿದ್ರೆ ಮಾತ್ರ ನಾವು ಮೇಲೆ ಹೋಗುವುದಕ್ಕೆ ಸಾಧ್ಯ. ಕೈಯಲ್ಲಿರುವ ಕಾಫಿ ಹಾಳಾದ ಹಾಗೆ ನಿನ್ನ ಜೀವನವನ್ನು ಹಾಳು ಮಾಡ್ಕೋಬೇಡ ದಯವಿಟ್ಟು ಇನ್ನಾದರೂ ಬದಲಾಗು ನಿನ್ನಲ್ಲಿ ಕೇಳಿಕೊಳ್ಳುತ್ತಿದ್ದೇನೆ ನಿನ್ನಿಂದ ಅದ್ಭುತವು ಸಾಧ್ಯವಾಗುತ್ತೆ. ಸಮಯವನ್ನು ಬಳಸಿಕೊಂಡರೆ ಮಾತ್ರ. ಇನ್ನೂ ನಿಂತು ಏನು ಯೋಚನೆ ಮಾಡ್ತಾ ಇದ್ದೀಯಾ ಒಂದು ಹೆಜ್ಜೆ ಇಟ್ಟು ಮುಂದುವರಿ. ಹೀಗೆ ತುಂಬಾ ನೋವಿನಿಂದ ಹೇಳಿ ನಾನು ಇನ್ನೂ ಬದಲಾಗದಿರುವುದನ್ನ ಕಂಡು ಕಣ್ಣೀರು ಹಾಕ್ತಾ ಅಮ್ಮ ಒಳಗೆ ನಡೆದು ಬಿಟ್ಟರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ