ಸ್ಟೇಟಸ್ ಕತೆಗಳು (ಭಾಗ ೧೩೦೩) - ಕಾರಣ

ಸ್ಟೇಟಸ್ ಕತೆಗಳು (ಭಾಗ ೧೩೦೩) - ಕಾರಣ

ಅವನು ಬೇಸರಗೊಂಡಿದ್ದಾನೆ. ಸಿಗದಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ ಇಷ್ಟು ದಿನ ಜೊತೆಗೆದ್ದು ಓಡಾಟ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡವರು ದೂರವಾಗಿದ್ದಾರೆ. ಹಾಗೆ ಅವನನ್ನು ತೊರೆದು ದೂರ ಹೋಗಿದ್ದಾಳೆ. ಕಂಡ ಕನಸುಗಳು ಇಷ್ಟು ದಿನ ಆಡಿದ ಮಾತುಗಳೆಲ್ಲವೂ ಸುಳ್ಳಾಗಿದೆ. ಮತ್ತೆ ಮತ್ತೆ ವ್ಯಥೆ ಪಡುತ್ತಾ ಸುಮ್ಮನಾಗಿದ್ದಾನೆ. ಈ ಕ್ಷಣದವರೆಗೂ ಆತನಿಗೆ ಆತನ ತಪ್ಪು ಅರ್ಥವೇ ಆಗ್ಲಿಲ್ಲ. ಆಕೆಯನ್ನು ಉಳಿಸಿಕೊಳ್ಳುವುದಕ್ಕೆ ಒಂದು ಕ್ಷಣವೂ ಪ್ರಯತ್ನ ಪಡದೆ ಅವನು ಬದಲಾಗುವುದಕ್ಕೆ, ಹೊಸ ಕೆಲಸ ಮಾಡುವುದಕ್ಕೆ ,ಉದಾ ಉದಾಸೀನ ಕಳೆದು ಹೊಸ ವ್ಯಕ್ತಿಯಾಗುವುದಕ್ಕೆ ಎಲ್ಲ ಅವಕಾಶಗಳಿದ್ದರೂ ಒಂದು ಚೂರು ಪ್ರಯತ್ನ ಪಡದೆ ಈಗ ಆಕೆಯನ್ನು ಕಳೆದುಕೊಂಡ ಮೇಲೆ ದುಃಖಿಸುವುದಕ್ಕೆ ಪ್ರಯತ್ನಪಡುತ್ತಿದ್ದಾನೆ. ದುಃಖಿಸಿ ದುಃಖಿಸಿ ಮೂಲೆಗೊರಗಿದ್ದಾನೆ. ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಡದವನಿಗೆ ಕಳೆದುಕೊಂಡ ಮೇಲೆ ದುಃಖಿಸುವ ಅರ್ಹತೆ ಇರುವುದಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ