ಸ್ಟೇಟಸ್ ಕತೆಗಳು (ಭಾಗ ೧೩೨೨) - ನೀ ಮೊದಲು

ಸ್ಟೇಟಸ್ ಕತೆಗಳು (ಭಾಗ ೧೩೨೨) - ನೀ ಮೊದಲು

ಮೊದಲು ನಿನ್ನ ಮುಂದಿಟ್ಟಿರುವ ಚಹಾದ ಲೋಟ ತುಂಬಿಸಿಕೋ. ಮತ್ತೆ ಉಳಿದವರಿಗೆ ಚಹಾ ನೀಡುವುದಕ್ಕೆ ಹೊರಟ್ರೆ ಸಾಕು. ಕಾಲ ಹಿಂದಿನಂತಿಲ್ಲ. ಹಾಲು ಸಕ್ಕರೆ ನೀರು, ಬೆಂಕಿ ಎಲ್ಲವೂ ನಿನ್ನ ಮನೆಯಲ್ಲೇ ಇರುವಾಗ ತುಂಬಾ ಶ್ರಮವಹಿಸಿ ಚಹಾವನ್ನು ತಯಾರು ಮಾಡಿರುವಾಗ ಆ ಚಹಾದ ಸ್ವಾಧವನ್ನ ನೀನು ಸವಿಯಲೇಬೇಕು. ನಿನ್ನ ಮುಂದಿಟ್ಟಿರುವ ಚಹಾದ ಕಪ್ಪನ್ನ ತುಂಬಿಸದೆ ಎದುರಿಗಿರುವ ಎಲ್ಲರಿಗೂ ಹಂಚುತ್ತಾ ಹೋದರೆ ಕೊನೆಗೆ ನಿನಗೆ ಬಳಕೆಗೆ ಬರದ ಚಹಾ ಹುಡಿಯೇ ಸಿಗುತ್ತದೆ ವಿನಹ ಚಹಾ ಸಿಗುವುದಿಲ್ಲ .ನಿನ್ನನ್ನು ನೀನು ಎತ್ತರಕ್ಕೆ ಏರಿಸಿಕೊಂಡ ಮೇಲೆ ಉಳಿದವರಿಗೆ ಮೆಟ್ಟಿಲು ನೀಡಬಹುದು ಶ್ರಮವಹಿಸಿ ಮೆಟ್ಟಿಲು ಕೆತ್ತಿ ಉಳಿದವರನ್ನ ಮೇಲಕ್ಕೇರಿಸಿ ಆಮೇಲೆ ನೀನು ಸಾಗುತ್ತೇನೆ ಅನ್ನುವ ಯೋಚನೆ ಪ್ರಸ್ತುತ ಕಾಲಘಟ್ಟದಲ್ಲಿ ಹೋಗುವಂತದ್ದಲ್ಲ. ಹಾಗಾಗಿ ನೀನೀಗ ಮಾಡ್ತಾ ಇರುವ ಕೆಲಸವೆಲ್ಲವೂ ಮೊದಲು ನಿನ್ನ ಬಳಕೆಯಾದ ನಂತರ ಉಳಿದವರ ಕಡೆಗೆ ಸಾಗಿ ಬಿಡಲಿ. ಅರ್ಥ ಆಯ್ತಾ. ಮಾವನ ಮಾತು ಸ್ವಲ್ಪ ಖಾರವಾಗಿತ್ತು. ಯಾಕೆಂದರೆ ನಾನು ಬದಲಾಗಬೇಕಾಗಿತ್ತು .ಅದು ತುಂಬಾ ಅಗತ್ಯವೂ ಆಗಿತ್ತು. ಇಷ್ಟು ದಿನ ನನ್ನನ್ನ ಗಮನಿಸಿದ ಮಾವ ತುಂಬಾ ನಿಷ್ಠೂರವಾಗಿ ಈ ಮಾತುಗಳನ್ನಾಡಿ ಅಲ್ಲಿಂದ ಹೊರಟುಬಿಟ್ರು ಕೇಳದೆ ನನಗೆ ಬೇರೆ ದಾರಿಯೂ ಇರಲಿಲ್ಲ ಅನುಸರಿಸದೇ ಹೊಸ ಮಾರ್ಗ ಕಾಣಲಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ