ಸ್ಟೇಟಸ್ ಕತೆಗಳು (ಭಾಗ ೧೩೭೮) - ಬಂಗಾರ

ಸ್ಟೇಟಸ್ ಕತೆಗಳು (ಭಾಗ ೧೩೭೮) - ಬಂಗಾರ

ತುಂಬಾ ಆಸೆ ಮೈಮೇಲೆ ಒಂದು ಸಣ್ಣ ಚಿನ್ನದ ತುಂಡಾದರೂ ಧರಿಸಬೇಕು ಅಂತ. ಅವನ ಆಸೆಗೆ ಜೊತೆಯಾಗಿ ನಿಂತವಳು ಮುದ್ದಿನ ಮಡದಿ, ಇಬ್ಬರೂ ಕಷ್ಟಪಟ್ಟು ಜೀವನವನ್ನು ಕಟ್ಟಿಕೊಂಡು ಜೀವನ ಬೆಳಗುತ್ತಾ ಹೋಯ್ತು. ಪ್ರತಿದಿನವೂ ಒಂದೊಂದು ರುಪಾಯಿ ಶೇಖರಿಸಿ ಹಲವು ವರುಷದ ಉಳಿತಾಯದಿಂದ ಒಂದು ಸಣ್ಣ ಚಿನ್ನದ ತುಂಡನ್ನ ಖರೀದಿಸುವ ಮಟ್ಟಕ್ಕೆ ಅವರು ಬೆಳೆದು ನಿಂತರು. ಸಂಗ್ರಹವಾದ ಎಲ್ಲ ದುಡ್ಡನ್ನು ಹಿಡಿದುಕೊಂಡು ಹೋಗಿ ಚಿನ್ನವೊಂದನ್ನು ಖರೀದಿಸಿ ಬಂದ ದಿನವೇ ಇಷ್ಟು ದಿನ ಜೊತೆಯಾಗಿ ನಿಂತವಳ ಆರೋಗ್ಯ ಕೈ ಕೊಟ್ಟಿತ್ತು. ಅವಳನ್ನು ಉಳಿಸಿಕೊಳ್ಳುವುದಕ್ಕೆ ಆ ಚಿನ್ನ ಮತ್ತೆ ಬ್ಯಾಂಕಿನ ಕಡೆ ಹೋಯಿತು. ಅದರ ದುಡ್ಡಿನಲ್ಲಿ ಮಡದಿ ಹುಷಾರಾದಳು, ಅದಾದ ನಂತರ ದಿನಗಳು ದಾಟಿದರೂ ಆದರೆ ಆ ಚಿನ್ನ ಒಂದು ದಿನ ಮನೆಯೊಳಕ್ಕೆ ಹೆಜ್ಜೆ ಇಟ್ಟಿಲ್ಲ. ಹೆಜ್ಜೆ ಇಡುವ ಕ್ಷಣದಲ್ಲಿ ಹೊಸತೊಂದು ಸಮಸ್ಯೆ ಕಾದು ಕುಳಿತುಕೊಂಡು ಆ ಚಿನ್ನವನ್ನು ಬ್ಯಾಂಕಿಗೆ ಕೊಂಡೊಯ್ಯುತ್ತದೆ. ಹೀಗಿದೆ ಇವರ ಬದುಕಿನ ಚಿನ್ನದ ಕಥೆ...ಬಂಗಾರ ಮನೆಯೊಳಗಿನ‌ ಆಸೆಯನ್ನ ಬೆಳಗಿಸಲೇ ಇಲ್ಲ.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ