ಸ್ಟೇಟಸ್ ಕತೆಗಳು (ಭಾಗ ೧೫೮) - ಪಕ್ಕದ ಸೀಟು
ನಮಸ್ಕಾರ ನಾನು "ಪಕ್ಕದ ಸೀಟಿನ" ಆಸಾಮಿ. ಏನ್ ಹೇಳೋದು ಸ್ವಾಮಿ ಇಷ್ಟು ದಿನ ಕಳೆದರೂ ನನ್ನ ಪಕ್ಕದ ಸೀಟು ಭರ್ತಿಯಾಗಲೇ ಇಲ್ಲ. ಹಾ! ಆದರೆ ಇವತ್ತು ಸರಿ ಆ ಘಟನೆ ಹೇಳ್ತೇನೆ. ನಾನು ಉಡುಪಿಗೆ ಹೊರಟಿದ್ದೆ ಕಾರ್ಯ ನಿಮಿತ್ತ. ಮೂರು ಜನರ ಸೀಟು ಖಾಲಿಯಾಗಿತ್ತು. ಕುಳಿತು ಕಾಯುತ್ತಿದ್ದೆ. ಯಾವನೋ ಒಬ್ಬ ಬಂದು ವಕ್ಕರಿಸಿದ. ಅವನ ಪಕ್ಕದಲ್ಲಿ ಆಕೆ ಕುಳಿತಳು. ಆತ ಕೋಟದಲ್ಲಿ ಇಳಿಯೋಕೆ ಟಿಕೇಟ್ ಖರೀದಿಸಿದ್ದ. ಆಕೆ ಉಡುಪಿಗೆ. ಕಾಯುತ್ತಿದ್ದೆ ಅಮೂರ್ತ ಘಳಿಗೆಗೆ. ಮೈಯೊಳಗೊಂದು ಸಂಚಲನ. ಗಾಡಿ ಚಲಿಸುತ್ತಾನೇ ಇಲ್ಲ. ಮತ್ತೆ ರಸ್ತೆಯ ಬದಿಯ ಗಮನಿಸುತ್ತಿದ್ದೆ. ಗೂಗಲ್ ಮ್ಯಾಪಿನಲ್ಲಿ ಆತ ಇಳಿಯುವ ವಿಳಾಸ ದಾಖಲಿಸಿ ನಿಮಿಷಗಳು ಕಡಿಮೆಯಾಗುವುದನ್ನು ನೋಡುತ್ತಾ ಕುಳಿತೆ. ನಿಜ ಹೇಳ್ತೇನೆ. ಸಮಾಯಾನೇ ಹೋಗ್ತಿಲ್ಲ. "ಕೋಟದಲ್ಲಿ ಇಳಿಯೋರು ಯಾರ್ರೀ" ಕಂಡಕ್ಟರ್ ನನ್ನ ಕಡೆಗಿದ್ದ ಕಾಣುತ್ತೆ . ಪಕ್ಕದಲ್ಲಿದ್ದವನ ನೋಡಿದೆ ಆತ ಬ್ಯಾಗು ಏರಿಸಿದ. ಅವಳು ಅವನಿಗೆ ದಾರಿ ಮಾಡಿಕೊಟ್ಟಳು. ನನ್ನ ಪಕ್ಕದ ಸೀಟಿಗೆ ಕೊನೆಗೂ ಮುಕ್ತಿ ಸಿಕ್ಕಿತು, ಅನ್ನುವಷ್ಟರಲ್ಲಿ ಅವಳಿಗೆ ಏನನ್ನಿಸಿತೋ ಏನೋ ಮುಂದಿನ ಸೀಟಿನ ಕಡೆಗೆ ಎದ್ದು ಹೊರಟಳು. ಅಲ್ಲಿ ಒಬ್ಬ ಕುಳಿತಿದ್ದ . ನನ್ನ ತೊರೆದು ಚಲಿಸುವಷ್ಟು ನಾನು ಕ್ರೂರಿಯಾಗಿದ್ದೇನಾ? ನನ್ನ ಮುಗ್ದ ಮುಖದಲ್ಲಿ ಅವಳು ಯಾರನ್ನ ಕಂಡಳೋ ಏನೋ? ಅಂತೂ ನನ್ನ ಪಕ್ಕದ ಸೀಟು ಖಾಲಿಯಾಗಿಯೇ ಉಳಿಯಿತು. ಮುಂದಿನ ಸೀಟಿನಲ್ಲಿ ಆಸಕ್ತಿಕರ ಸಂಭಾಷಣೆ ನಡೆಯಿತು ಅದನ್ನ ನಾಳೆ ಹೇಳ್ತೇನೆ. ಇನ್ಯಾರಿಗೆ ಮನವಿ ಸಲ್ಲಿಸಲಿ ನನ್ನ ಪಕ್ಕದ ಸೀಟಿಗೆ ನಿಮಗೆ ಮಾಹಿತಿ ಇದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ