ಸ್ಟೇಟಸ್ ಕತೆಗಳು (ಭಾಗ ೨೨೬) - ಉಳಿದ ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೨೨೬) - ಉಳಿದ ಪ್ರಶ್ನೆ

"ಅಪ್ಪ ಮುಂದಿನ ದೀಪಾವಳಿಗೆ ಮತ್ತೆ ಬರುತ್ತೇನೆ, ಈಗ ಆಳಬೇಡ. ನಾನು ರೈಲು ಹತ್ತುತ್ತೇನೆ"

"ರೀ ಸಂಜೆ ಬೇಗ ಬನ್ನಿ, ಮಗನ ಬರ್ತ್ ಡೇ ನೆನಪಿದೆ ಅಲ್ವಾ?"

 "ಲೋ, ಸದಾ Next ಬರುವ ರೈಲ್ ಯಾವುದು, 15 ನಿಮಿಷದಲ್ಲಿ ಬರಲಿಕ್ಕಿಲ್ವಾ?" 

"ಟೀ,ಟೀ,ಟೀ"

"ಹಲೋ ಅಮ್ಮ, ಇನ್ನೊಂದು ಐದು ನಿಮಿಷ! ಕಾಯ್ತಾ ಇದ್ದೇನೆ. ತಿಂದಿದ್ದೇನೆ ಅಮ್ಮ ಆಮೇಲೆ ಕಾಲ್ ಮಾಡ್ತೀನಿ" 

"ನೆಕ್ಸ್ಟ್ ಟ್ರೈನ್ ಬೆಂಗಳೂರು ತಲುಪುವಾಗ ಎಷ್ಟೊತ್ ಆಗುತ್ತೆ ?"

"ಮಗೂ ಓಡಬೇಡ, ಈಗ ಟ್ರೈನ್ ಹೊರಡುತ್ತೆ .ಬಾ ಬೇಗ"

" ನಿನ್ನ ಎಷ್ಟು ದಿನ ಬಿಟ್ಟಿರಬೇಕು, ಆಗೋದಿಲ್ಲ ಮುದ್ದು"

"ನಾಳೆಯಿಂದ ಕಾಲೇಜ್ ಶುರು ಹೇಗಿರುತ್ತೋ ಏನೋ" 

"ನೆಕ್ಸ್ಟ್ ರಜೆ ಕೊಟ್ಟಾಗ ಬಾರ್ಡರ್ ನಿಂದ ಬರುತ್ತೇನೆ"

 "ಮಗಾ ನಿನ್ನ ಆರೋಗ್ಯ ......

" ಡಂ....ಡಮಾರ್.....

ಮೌನದ ಹೊಗೆಯ ನಡುವಿನಿಂದ ಸಣ್ಣ ಚೀತ್ಕಾರಗಳು ಕೇಳಿಬಂದವು, ದೇಹಗಳು ಭೇದ ಭಾವ ಮರೆತು ತುಂಡುಗಳಾಗಿ ಒಂದಾಗಿವೆ. ಎಲ್ಲಾ ಮಾತುಗಳು ಅಲ್ಲೇ ಉಳಿದಿವೆ. ಪ್ರಶ್ನೆಗಳು ಉತ್ತರಗಳನ್ನು ಹುಡುಕುತ್ತಿವೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ