ಸ್ಟೇಟಸ್ ಕತೆಗಳು (ಭಾಗ ೨೮೭) - ನಾಲಗೆ

ನನಗೆ ನಾಟಕ ಅಂದ್ರೆ ತುಂಬಾ ಇಷ್ಟ . ಹಾಗಾಗಿ ಎಲ್ಲೇ ನಾಟಕದ ಪ್ರದರ್ಶನಗಳಾದರೂ ಹೋಗಿ ನೋಡಿ ಆನಂದಿಸುತ್ತೇನೆ. ಅಭಿನಯಿಸಿದವರನ್ನ ಅಭಿನಂದಿಸುತ್ತೇನೆ. ನಾನಂದುಕೊಂಡಿದ್ದೆ ನಾಟಕ ಅನ್ನೋದು ವೇದಿಕೆಯ ಮುಂದೆ, ಅದಕ್ಕೊಂದಿಷ್ಟು ಪೂರ್ವ ತಯಾರಿಗಳನ್ನು ಇಟ್ಟುಕೊಂಡು ಬಣ್ಣ, ವಸ್ತ್ರಾಲಂಕಾರ, ಬೆಳಕು, ಸಂಗೀತ ಇವೆಲ್ಲವನ್ನು ಇಟ್ಟುಕೊಂಡು ಪ್ರದರ್ಶಿಸುವ ಒಂದು ಕಲೆಯೆಂದು. ಆದರೆ ಇತ್ತೀಚಿಗೆ ನನ್ನ ಸುತ್ತಮುತ್ತಲಿನ ವೇದಿಕೆಯಿಲ್ಲದ ಜಾಗದಲ್ಲೂ ನಾಟಕ ಪ್ರದರ್ಶನವಾಗುತ್ತಿದೆ. ನಾಟಕಗಳಿಗೆ ಮುಖ್ಯ ಸೂತ್ರದಾರಿ ನಾಲಗೆ. ಇವನು ಹೇಗೆ ಅಭಿನಯಿಸುತ್ತಾನೆ ಅನ್ನೋದು ಯಾರ ಅರಿವಿಗೂ ಸಿಗೋದಿಲ್ಲ. ಒಂದು ಕ್ಷಣದಲ್ಲಿ ಸಹಾಯಕನಾಗಿದ್ದವ, ಕ್ಷಣಮಾತ್ರದಲ್ಲಿ ಮೋಸಗಾರನು ಆಗಬಲ್ಲ, ಪ್ರೀತಿಯನ್ನು ಹಚ್ಚಬಲ್ಲ, ಮಾಡಬಲ್ಲ, ಮನಸ್ಸಿಗೆ ನೋವು ನೀಡಬಲ್ಲ, ಆಸರೆಯನ್ನು ನೀಡಬಲ್ಲ, ಹೀಗೆ ಅವನಿಗೆ ವಸ್ತ್ರವಿನ್ಯಾಸದ ಅವಶ್ಯಕತೆಯಿಲ್ಲ, ಅದಕ್ಕಾಗಿ ಸಿದ್ಧಪಡಿಸಿದ ನಾಟಕದ ಪುಸ್ತಕ ಬೇಕಾಗಿಲ್ಲ. ಎಲ್ಲವೂ ಆತನೊಳಗೆ ಸೃಜಿಸುತ್ತಿರುತ್ತದೆ. ಬಣ್ಣ ಧರಿಸದಿದ್ದರೂ ಕೆಲವೊಮ್ಮೆ ಪಾತ್ರದ ಅನುಭವ ಸಿಗುತ್ತದೆ. ಕೆಲವೊಮ್ಮೆ ಪರದೆ ಹಿಂದೆಯೇ ನಾಟಕವಾಗಿ ಬಿಡುತ್ತದೆ. ನಾನು ಇಷ್ಟರವರೆಗೆ ಕಂಡ ನಾಟಕಗಳಲ್ಲಿ ಸಾಯಬೇಕೆಂದರೆ ಆತನಿಗೆ ಮಾರಣಾಂತಿಕವಾಗಿ ಗಾಯವಾಗ ಬೇಕಾಗಿತ್ತು, ಆದರೆ ಈ ನನ್ನ ನಾಟಕಕಾರ ಇದ್ದಾನಲ್ಲ, ಅವನು ಯಾವುದೇ ರೀತಿಯಲ್ಲೂ ವ್ಯಕ್ತಿಯ ದೇಹವನ್ನು ಮುಟ್ಟದೆ ಆತನಿಗೆ ಚಿತ್ರಹಿಂಸೆ ನೀಡಿ ಕೊಲ್ಲಬಲ್ಲ. ನೋವು ಇರುವ ವ್ಯಕ್ತಿಯನ್ನು ಅತ್ಯುತ್ತಮ ಪದವಿಗೆ ಏರಿಸಬಲ್ಲದು. ನನ್ನ ನಾಲಗೆ ಎನ್ನುವ ನಟನಲ್ಲಿ ಬೇಡಿಕೆಯೊಂದೇ ಮಾರಾಯ ನೀನು ಯಾವುದೇ ರೀತಿಯ ಅಭಿನಯವನ್ನು ಮಾಡುವುದಾದರೆ ದಯವಿಟ್ಟು ಪಾತ್ರಗಳ ಆಯ್ಕೆಯಲ್ಲಿ ಸ್ವಲ್ಪ ಸರಿಯಾಗಿರು ಸಾಗುತ್ತಿರುವ ಹಾದಿಗೆ ಕಲ್ಲಾಗಿ ಮುಂದೆ ಸಾಗದಂತೆ ಮಾಡುವ ಯಾವುದೇ ಪಾತ್ರ ನಿನಗಿಲ್ಲ. ನಿನ್ನ ಅಭಿನಯದಿಂದ ನಿನ್ನ ವಾಕ್ ಚತುರತೆಯಿಂದ ಸಾಗುತ್ತಿರುವ ಬದುಕಿನ ಹಾದಿಗೆ ಒಂದಷ್ಟು ಬೆಳಕು ಚೆಲ್ಲುವ ಕೆಲಸಗಳ ಆದರೆ ನೀನು ರಂಗವೂ ಸಾರ್ಥಕವಾಗುತ್ತದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ