ಸ್ಟೇಟಸ್ ಕತೆಗಳು (ಭಾಗ ೩೪೦) - ಮದುವೆ
ಅದ್ಯಾರು ಹೇಳಿದ್ದು ಗೊತ್ತಿಲ್ಲ, ಮದುವೆ ಮನೆಯೆಂದರೆ ಸಂಭ್ರಮದ ಗೂಡು. ಅಲ್ಲಿ ಖುಷಿಯು ಕುಣಿಯುತ್ತಿರುತ್ತದೆ. ಆದರೆ ಅದು ದೊಡ್ಡ ದುಡ್ಡಿರುವ ಮನೆಯಲ್ಲಿ ಆಗಬಹುದು. ಸಾಲವನ್ನೇ ನಂಬಿ ಜೀವನ ಸಾಗಿಸುವ ಪುಟ್ಟ ಬದುಕಿನ ಮನಸ್ಸುಗಳ ಮದುವೆಯೆಂದರೆ ಅದೊಂದು ತಲೆನೋವು. ಅಲ್ಲಿ ಒಂದಷ್ಟು ಗೋಜಲು ಗೋಜಲಾದ ವಾತಾವರಣ, ಎಲ್ಲರ ಮುಖದಲ್ಲೂ ಆತಂಕ, ಕೆಲಸವಾಗಬೇಕಾದ ಚಡಪಡಿಕೆ, ಯಾವುದನ್ನು ಬಿಟ್ಟಿದ್ದೇವೆ ಬಿಟ್ಟಿಲ್ಲ ಎನ್ನುವ ಭಯ, ಮಧ್ಯಾಹ್ನಕ್ಕೆ, ಸಂಜೆಗೆ, ಹೋಗೋದಕ್ಕೆ, ನಿಲ್ಲುವುದಕ್ಕೆ, ಎಲ್ಲದಕ್ಕೂ ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿ. ಎಲ್ಲ ಹೊರಟುಬಿಟ್ಟರೆ ಇಲ್ಲಿ ಯಾರು? ಅಲ್ಲಾಗುವ ಖರ್ಚಿಗೆ ಹೇಗೆ ದುಡ್ಡು ಹೊಂದಾಣಿಕೆ ಮಾಡೋದು? ಕೈಯಲ್ಲಿರೋದು ಪೂರ್ತಿಯಾಗಿದೆ ನಾಳೆಗೆ ಏನು ಮಾಡುವುದು? ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಂಭ್ರಮಕ್ಕಿಂತ ಆ ದಿನ ನಿಭಾಯಿಸಿದರೆ ಸಾಕು ಅನ್ನುವ ಯೋಚನೆಯೇ ಎಲ್ಲರಲ್ಲಿಯೂ... ಮದುವೆ ಅನ್ನೋದು ಸಂಭ್ರಮ ಒಪ್ಪಿಕೊಳ್ಳೋಣ ಆದರೆ ಅದಕ್ಕಿಂತ ಹೆಚ್ಚಿನದ್ದು ಭಯ-ಆತಂಕ ಇವುಗಳ ಸಮ್ಮಿಶ್ರಣದ ಭಾಗವಾಗಿದೆ ಸದ್ಯಕ್ಕೆ ಇಷ್ಟನ್ನು ದೂರದಲ್ಲಿ ನಿಂತು ಗಮನಿಸಿದ್ದೇನೆ. ಮನೆಯಂಗಳದಲ್ಲಿ ಸ್ವತಃ ಅನುಭವಿಸಲು ಕಾಯುತ್ತಿದ್ದೇನೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ