ಸ್ಟೇಟಸ್ ಕತೆಗಳು (ಭಾಗ ೩೫೦) - ತಲೆ ಎತ್ತುವ...

ಸ್ಟೇಟಸ್ ಕತೆಗಳು (ಭಾಗ ೩೫೦) - ತಲೆ ಎತ್ತುವ...

ಊರಾಗುವ ಮೊದಲು ಅದು ಕಾಡಾಗಿತ್ತು. ಬೇರೆ ಬೇರೆ ಊರಿನ ಜನ ಅಲ್ಲಿಗೆ ಬಂದು ನೆಲೆ ನಿಂತ ಮೇಲೆ ಅದು ಊರಾಗಿದ್ದು. ಒಂದೊಂದೇ ಮನೆಗೆಳು ನಿಂತ ಹಾಗೆ ನಾಗ, ದೈವ, ದೇವರು, ತಲೆ ಎತ್ತಿದವು. ಅವು ಯಾವುದೂ ಜನ ಬಂದು ಪ್ರತಿಷ್ಠೆ ಮಾಡಿದ್ದಲ್ಲ. ಜನ ಬರೋದಕ್ಕೂ ಮೊದಲೂ ಅಲ್ಲೇ ಇತ್ತು. ಜನ ಬಂದ ಮೇಲೆ ಜನರೊಂದಿಗೆ ಬೆರೆತವು. ಆ ಊರಿನ ಎಲ್ಲ ನಂಬಿಕೆಗಳು ಆಡಂಬರವನ್ನು ಬಯಸಿಲ್ಲ. ನಾವು ತಿನ್ನೋದು, ಮುಡಿಯೋದು, ಕುಡಿಯೋದನ್ನ  ಅದರ ಆಹಾರವನ್ನಾಗಿ ಮಾಡಿಕೊಂಡವು. ಊರು ಬೆಳೆದ ಹಾಗೆ ಅವುಗಳು ಬೆಳೆದವು. ಆ ನಂಬಿಕೆಯ ನಾಗ, ದೈವ ದೇವರುಗಳನ್ನ ಊರಿನ ಜೊತೆಗೆ ಇರಿಸಿಕೊಳ್ಳಬೇಕು, ಮರೆಯುವುದಾಗಲಿ, ಅಸಡ್ಡೆ ಮಾಡುವುದಾಗಲಿ ಮಾಡೋ ಹಾಗಿಲ್ಲ. ಊರವರ ನಂಬಿಕೆ ಪ್ರಕಾರ ಆ ದೇವರುಗಳಿದ್ದರಿಂದಲೇ ಊರು ಬೆಳೆದದ್ದು. ಊರು ಇದ್ದರಿಂದಲೇ ದೇವರು ಬೆಳಕಿಗೆ ಬಂದದ್ದು. ಇಲ್ಲಿ ಎಲ್ಲರೂ ಬದುಕುತ್ತಿದ್ದಾರೆ ಅಷ್ಟೆ. ಜನ ಹೆಚ್ಚೆ ತಲೆ ಎತ್ತಿದ್ದಷ್ಟು, ದೈವ ದೇವರುಗಳು ನೆಲದೊಳಗಿಂದ ತಲೆ ಎತ್ತುತ್ತವೆ. ತಮಗೊಂದು ಸ್ಥಳಾವಕಾಶ ಕೇಳುತ್ತವೆ. ಭಕ್ತಿಯಾಗಿದ್ದಷ್ಟು ಊರು ಉಳಿಯುತ್ತದೆ. ಆಡಂಬರಕ್ಕೆ ಇಳಿದರೆ ಮತ್ತೆ ಊರು ಕಾಡಾಗುತ್ತದೆ. ಇದು ಈಗ ಇರುವ ಆ ಊರವರಿಗೆ ಗೊತ್ತಿದೆ. ಮುಂದಿನವರಿಗೆ…?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ