ಸ್ಟೇಟಸ್ ಕತೆಗಳು (ಭಾಗ ೩೬೫) - ಆಕಾಶ ಅಳುತ್ತಿದೆ !
ಆಕಾಶ ರಚ್ಚೆ ಹಿಡಿದು ಅಳುತ್ತಿದೆ. ಅಳುವನ್ನು ನಿಲ್ಲಿಸೋಕೆ ಗೊತ್ತಾಗ್ತಾಯಿಲ್ಲ. ಮಗುವಿಗೆ ಆದರೆ ಏನಾದರೂ ಸಮಾಧಾನ ಮಾಡಬಹುದು, ಆದರೆ ಆಕಾಶಕ್ಕೆ ಹೇಗೆ ಅಂತ ಸಮಾಧಾನ ಮಾಡೋದು? ಸಮಾಧಾನ ಮಾಡಬೇಕು ಅಂದ್ರೆ ಆಕಾಶಕ್ಕೆ ಇಷ್ಟ ಯಾವುದೊಂದು ತಿಳ್ಕೊಬೇಕು ? ನೋವಿಗೆ ಕಾರಣವೇನು ಅರಿತುಕೊಳ್ಳಬೇಕು? ಆಕಾಶದ ಅಳು ಹೆಚ್ಚಾಗ್ತಾ ಹೋದರೆ, ಅದರ ಕಣ್ಣೀರಿನಿಂದ ಭೂಮಿ ತುಂಬಿ ಹೋಗಬಹುದು, ಬದುಕೋರಿಗೆ ಕಷ್ಟ ಆಗಬಹುದು. ಈಗ ಸದ್ಯ ಇಲ್ಲಿ ಬದುಕ್ತಾ ಇರೋರು ಪ್ರತಿಯೊಬ್ಬರೂ ಆಕಾಶವನ್ನು ಸಮಾಧಾನ ಮಾಡುವುದು ಹೇಗೆ ಅಂತ ಯೋಚನೆ ಮಾಡೋದು ಒಳ್ಳೆಯದು. ಈಗ ಸಮಾಧಾನ ಮಾಡುವ ವಿಧಾನವನ್ನು ಯೋಚನೆ ಮಾಡಿದರೆ ಸ್ವಲ್ಪ ದಿನಗಳಲ್ಲಾದರೂ ಪರಿಹಾರ ಸಿಗಬಹುದು. ಆಕಾಶಕ್ಕೆ ಏನು ವಿಪರೀತ ನೋವಾಗಿದೆ? ಅದಕ್ಕೆ ಉಸಿರಾಟದ ತೊಂದರೆ ಆಗಿರಬಹುದು , ಹಸಿವಾಗಿರಬಹುದು, ಗಾಯ ಆಗಿರಬಹುದು ಇವುಗಳನ್ನು ಪರಿಹಾರ ಮಾಡುವ ವಿಧಾನವನ್ನು ಹುಡುಕಬೇಕು. ಊರಲ್ಲಿ ಒಂದಷ್ಟು ಹೆಚ್ಚು ಮರಗಿಡಗಳನ್ನು ಬೆಳೆಸುವುದು, ವಾಹನ ಕಾರ್ಖಾನೆಗಳು ಕಡಿಮೆ ಹೊಗೆ ಬಿಡುವಂತೆ ಮಾಡಬಹುದು ಅನ್ನಿಸುತ್ತೆ. ಭೂಮಿ ತುಂಬ ಮರಗಿಡಗಳನ್ನು ಹಾಕಿ ಪೂರ್ತಿ ಹಸಿರು ಮಾಡಿದ್ರೆ ಆಕಾಶ ನಗಬಹುದು. ಖುಷಿಯಿಂದ ಆದರೂ ಆಕಾಶ ಆಡುವುದು ಕಡಿಮೆಯಾಗಬಹುದು. ನಾವು ಬದುಕಬಹುದು. ಆಕಾಶವನ್ನು ಖುಷಿಪಡಿಸುವುದಕ್ಕೆ ಒಂದಷ್ಟು ಹಸಿರು ಬೀಜಗಳನ್ನು ನೆಲಕ್ಕೆ ಚೆಲ್ಲೋಣ ಮರವಾಗುವವರೆಗೆ ನೀರು ಹಾಕೋಣ ಏನಂತೀರಿ ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ