ಸ್ಟೇಟಸ್ ಕತೆಗಳು (ಭಾಗ ೪೧೧) - ನಾಯಿ

ಸ್ಟೇಟಸ್ ಕತೆಗಳು (ಭಾಗ ೪೧೧) - ನಾಯಿ

ಮನೆಯಲ್ಲಿ ನನಗೆ ನನ್ನಪ್ಪ ಬಯ್ಯೋ ಹಾಗೆ ನಮ್ಮ ಮನೆಯ ನಾಯಿಮರಿಗೆ ಅದರಪ್ಪ ಅಮ್ಮ ಬಯ್ಯ ಬಹುದಾ? ಹೀಗೊಂದು ಯೋಚನೆ .ನನಗೆ ನನ್ನ ಮನೆಯಲ್ಲಿ ಅಪ್ಪ ಅಮ್ಮ ಹೇಗೆ ನೋಡ್ಕೋತಾರೆ ಹಾಗೆಯೇ ನಮ್ಮ ಮನೆ ನಾಯಿಯನ್ನು ಅದರ ಅಪ್ಪ-ಅಮ್ಮ ನೋಡಿಕೊಳ್ಳಬಹುದಾ? ಬೆಳಗ್ಗೆ ಎಷ್ಟೊತ್ತಿಗೆ ಏಳಬೇಕು ? ತಿಂಡಿ ತಿನ್ಕೊಂಡು ಶಾಲೆಗೆ ಹೊರಡಬೇಕು, ಇಂಥದ್ದೆಲ್ಲಾ ಯೋಚನೆ ನಾಯಿಮರಿಗೆ ಇಲ್ಲ. ತಿಂಡಿ ತಿಂದು ಮನೆ ಯಾವುದು, ಹೇಗೆ ನೋಡಿಕೊಳ್ಳಬೇಕು, ಯಜಮಾನ ಇವರು, ಅವರಮ್ಮ ಇವರು ಇದನ್ನೆಲ್ಲ ಕೂಡ ಹೇಳಿಕೊಡಬಹುದು. ನಾಯಿ ಕುಟುಂಬ ಮೂರು ಜನ ಕೂತಿದ್ದಾಗ ಮಗನ ಜೊತೆ ಅಪ್ಪ-ಅಮ್ಮ ತುಂಬಾ ಪ್ರೀತಿಯಿಂದ ಆಟ ಆಡಬಹುದು, ಆ ಮಗ ದೊಡ್ಡವನಾದ್ಮೇಲೆ ಮನೆಯನ್ನ ಕಾಯ್ತಾ ಮನೆಯವರ ಪ್ರೀತಿಯನ್ನು ಸಂಪಾದಿಸಿ ಇಡೀ ಕೇರಿಯಲ್ಲಿ ಒಂದು ಹೆಸರು ಸಂಪಾದಿಸಬೇಕು ಅನ್ನುವ ಆಸೆ ಇರಬಹುದು,  ಕಾಯುತ್ತಿರುವ ಮನೆಗೆ ಯಾವತ್ತೂ ಚಿರಋಣಿಯಾಗಿರಬೇಕು, ಅವರು ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಆಹಾರದ ಹೊತ್ತಿನಲ್ಲಿ ಒಂದು ಆಹಾರವನ್ನು ಸೇವಿಸಿ ಮನೆಯನ್ನು ಗಟ್ಟಿಯಾಗಿ ನೋಡಿಕೊಳ್ಳಬೇಕು.

ಏನಾದ್ರೂ ಪಕ್ಕದ ಮನೆಗೆ ಹೋಗಿ ಆಟ ಆಡಿ ಯಾವುದಾದರೂ ಕಿಟಕಿಯಲಿ ಇಣುಕಿ ಟಿವಿಯಲ್ಲಿ ಏನಾಗುತ್ತಿದೆಯೆಂದು ನೋಡಿದ್ರೆ ನನಗೆ ಹೊಡಿತಾ ಇದ್ದ ಹಾಗೆ, ನಾನು ಎಲ್ಲಾದರೂ ಬಿದ್ದರೆ ನನಗೆ ಅಮ್ಮ ಎರಡು ಹೊಡೆದು ಆಮೇಲೆ ಸಮಾಧಾನ ಮಾಡುತ್ತಿದ್ದ ಹಾಗೆ, ನಾಯಿಮರಿಗೆ ಅದರಮ್ಮ ಹಾಗೆ ಮಾಡಬಹುದಾ? ಗೊತ್ತಿಲ್ಲ. ಒಟ್ಟಿನಲ್ಲಿ ನಾಯಿ ಜೊತೆ ಅದರ ಅಪ್ಪ ಅಮ್ಮ ಹೇಗಿರಬಹುದು? ಪ್ರಶ್ನೆಗಳಷ್ಟೇ ಇದಕ್ಕೆ ಉತ್ತರ ನಾಯಿಯ ಬಳಿ ಕೇಳಿದರೆ ಅದು ಉತ್ತರಿಸುವುದು ಹೇಗೆ ? ಅದು ಉತ್ತರಿಸಿದರೂ ಅದರ ಭಾಷೆ ನನಗೆ ಅರ್ಥವಾಗಬೇಕೇ? ಹಾಗಾಗಿ ಇದು ಪ್ರಶ್ನೆಗಳಷ್ಟೇ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ